ರಾಯಚೂರು: ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದಲೇ ಅಣ್ಣನ ಕೊಲೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಕೋಟೆ(50) ಕೊಲೆಯಾಗಿರುವ ವ್ಯಕ್ತಿ. ಆರೋಪಿ ಶರಣಪ್ಪ ಸಂಬಂಧದಲ್ಲಿ ಸಹೋದರನಾಗಬೇಕು. ಮನೆ ಹೆಣ್ಣುಮಕ್ಕಳು ಬಟ್ಟೆ ತೊಳೆಯುವಾಗ ನೀರು ಎರಚಿದ ವಿಚಾರಕ್ಕೆ ಜಗಳ ಶುರುವಾಗಿ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಇಬ್ಬರು ರಾಜಿ ಸಂಧಾನವಾದ ಮೇಲು ಕ್ಯಾತೆ ತೆಗೆದು ಜಗಳ ಮಾಡಿಕೊಂಡಿದ್ದರು. ನಿನ್ನೆ ಸಂಜೆ ಪುನಃ ಸಂಧಾನಕ್ಕೆ ಕರೆದು ಆರೋಪಿ ಶರಣಪ್ಪ ಹಾಗೂ ಆತನ ಕಡೆಯವರು ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಇದನ್ನೂ ಓದಿ: ಚೈನ್ ಕೀಳಲು ಬಿಡದಿದ್ದಕ್ಕೆ ಕೆರೆಗೆ ತಳ್ಳಿದ ಕಳ್ಳ- ಮಹಿಳೆ ಸಾವು
ಗ್ರಾಮದಲ್ಲಿ ಮರ್ಯಾದಸ್ಥ ಕುಟುಂಬಗಳು ಎನ್ನುವ ಹೆಸರಿದ್ದರೂ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕೊಲೆ ಹಂತಕ್ಕೆ ಹೋಗಿದ್ದಾರೆ. ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧವೂ ED ತನಿಖೆ ಮಾಡಿತ್ತು, ಆಗ ಹೋರಾಟ ಮಾಡಿರಲಿಲ್ಲ: ಕಟೀಲ್