ಅತ್ತಿಗೆಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

Public TV
2 Min Read
DVG MURDER copy

ದಾವಣಗೆರೆ: ಅವರಿಬ್ಬರು ಅಕ್ಕ-ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಿಯವಾಗಿತ್ತು. ಅಣ್ಣ ಮದುವೆಯಾಗಬೇಕಿದ್ದ ಹುಡುಗಿಯ ಮೇಲೆ ಮೈದುನನಿಗೆ ಪ್ರೇಮಾಂಕುರ ಆಗಿತ್ತು. ಹೀಗಾಗಿ ಅತ್ತಿಗೆ ಆಗಬೇಕಾಗಿದ್ದವಳ ಮೇಲೆ ಕಣ್ಣು ಹಾಕಿದ್ದ ಎಂಬ ಒಂದೇ ಕಾರಣಕ್ಕೆ ಕಿರಾತಕ ಅಣ್ಣ ತಮ್ಮನ ಕತ್ತು ಸೀಳಿ ಕಥೆ ಮುಗಿಸಿದ್ದಾನೆ.

DVG MURDER 1

ಹೌದು. ಅವರಿಬ್ಬರು ಚಿಕ್ಕದೊಡ್ಡಮ್ಮನ ಮಕ್ಕಳು. ಅಣ್ಣನ ಮದುವೆ ನಿಶ್ಚಿಯ ಆಗಿದ್ದರಿಂದ ಅಣ್ತಮ್ಮ ಇಬ್ಬರು ಶಾಪಿಂಗ್ ಗೆ ತೆರಳಿದ್ದಾರೆ. ಬೆಳಗಾಗುವುದರಲ್ಲಿ ದುರದೃಷ್ಟ ಅಂದರೆ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಸಿಕ್ಕದ್ದರೆ, ಮತ್ತೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದನು. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಶಾಂಪಿಗ್ ಗೆ ಕರೆದುಕೊಂಡು ಬಂದಿದ್ದ ಅಣ್ಣ ಇಬ್ರಾಹಿಂನೇ ಹುಡುಗಿ ವಿಚಾರವಾಗಿ ಸಹೋದರ ಅಲ್ತಾಫ್ ನ ಕಥೆ ಮುಗಿಸಿದ್ದಾನೆ.

DVG MURDER 2

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹಬೂಬ್ ಬಾಷಾರವರ ಮಗ ಅಲ್ತಾಫ್ ಇದೇ ತಿಂಗಳು 19ಕ್ಕೆ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ದನು. ಇದೀಗ ಅದು ಕೊಲೆ ಎಂದು ದೃಢವಾಗಿದೆ. ಸ್ವತಃ ಅಣ್ಣ ತಮ್ಮನ ಕೊಲೆ ಮಾಡಿದ್ದಾನೆ ಎಂದು ಪೋಲಿಸ್ ತನಿಖೆಯಿಂದ ಸತ್ಯ ಹೊರಬಂದಿದೆ. ಅಣ್ಣ ಇಬ್ರಾಹಿಂ ಮದುವೆ ನಿಶ್ಚಿಯವಾಗಿದ್ದ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ ಹಾಕಿದ್ದನಂತೆ. ಇದನ್ನು ಸಹಿಸಿಕೊಳ್ಳದ ಅಣ್ಣ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಶಾಪಿಂಗ್ ಗಾಗಿ ಕರೆದುಕೊಂಡು ಬಂದಿದ್ದಾನೆ. ಈ ಸಮದರ್ಭದಲ್ಲಿ ಸಹೋದರ ಅಲ್ತಾಫ್ ನ ಕತ್ತು ಸೀಳಿ ಕೊಲೆ ಮಾಡಿ ಕಾಲ್ಕಿತ್ತು, ಇದೀಗ ಪೊಲೀಲಿಸರ ಅಥಿತಿಯಾಗಿದ್ದಾನೆ. ಇದನ್ನೂ ಓದಿ:  ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

DVG MURDER 3

ಆರೋಪಿ ಅಣ್ಣ ಇಬ್ರಾಹಿಂ ಅವರ ಮದುವೆ ಮಾರ್ಚ್ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದರ ಹಿನ್ನೆಲೆ ಹೆಣ್ಣಿನ ಮನೆಗೆ ನಿಶ್ಚಿತಾರ್ಥದ ಶಾಸ್ತ್ರಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್ ಜವಳಿ ಖರೀದಿಗೆಂದು ಜನ.18ಕ್ಕೆ ಸಂಜೆ ದಾವಣಗೆರೆ ಹೋಗಿದ್ದರು. ರಾತ್ರಿ 8.30ರವರೆಗೆ ಫೋನ್ ಸಂಪರ್ಕದಲ್ಲಿದ್ದರು. ನಂತರ ಇದ್ದಕ್ಕಿದ್ದಂತೆ ಒಂದು ಫೋನ್ ಸ್ವಿಚ್ ಆಫ್ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಆರೋಪಿ ಇಬ್ರಾಹಿಂ ನ ಫೋನ್ ಆನ್ ಇದ್ರೂ ಕಾಲ್ ರೀಸೀವ್ ಮಾಡುತ್ತಿರಲ್ಲ. ತಡರಾತ್ರಿ ಸಹೋದರರಿಬ್ಬರು ಮನೆಗೆ ವಾಪಸ್ ಬಾರದ ಹಿನ್ನೆಲೆ ಕುಟುಂಬದವರು ಹರಿಹರ ನಗರ ಪೊಲೀಸ್ ಠಾಣೆಗೆ ದೂರ ನೀಡಿದ್ರು. ಬುಧವಾರ ಸಂಜೆ ಅಲ್ತಾಫ್ ಶವ ದಾವಣಗೆರೆ ಮಹಾಲಕ್ಷ್ಮೀ ಲೇಔಟ್ ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಬ್ರಾಹಿಂ ಹಾಗೂ ಆತನ ಬೈಕ್ ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುರಿಸಿದ್ದರು. ಇದೀಗ ಹುಡುಗಿ ವಿಚಾರವಾಗಿ ಅಣ್ಣ ಇಬ್ರಾಹಿಂ ಸಹೋದರ ಅಲ್ತಾಫ್ ನ ಕೊಲೆ ಮಾಡಿರುವ ಪ್ರಕರಣವನ್ನು ದಾವಣಗೆರೆ ಪೋಲಿಸರು ಭೇದಿಸಿ ಆರೋಪಿ ಇಬ್ರಾಹಿಂನನ್ನು ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆ್ಯಂಡ್ ಗ್ಯಾಂಗ್‍ನಿಂದ ರಂಪಾಟ

DVG MURDER 4

ಒಟ್ಟಾರೆ ಅಲ್ತಾಫ್ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಆತನ ಮೈ ಮೇಲಿರುವ ಗಾಯಗಳು ಇದು ಕೊಲೆ ಎಂದು ಹೇಳುತ್ತಿದ್ದವು. ಪ್ರಕರಣವನ್ನು ದಾಖಲಿಸಿಕೊಂಡ ವಿದ್ಯಾನಗರ ಠಾಣೆಯ ಪೋಲಿಸರು ಘಟನೆ ನಡೆದ ಒಂದೇ ವಾರದಲ್ಲೀ ಆರೋಪಿ ಇಬ್ರಾಹಿಂ ನ ಹೆಡೆಮುರಿ ಕಟ್ಟಿದ್ದಾರೆ. ಅದೇನೆ ಆಗಲಿ ಹೆಣ್ಣಿನ ವಿಚಾರವಾಗಿ ಮನೆಯಲ್ಲಿ ಕೂತು ದೊಡ್ಡವರ ಸಮ್ಮುಖದಲ್ಲಿ ಬಗಹರಿಸಿಕೊಳ್ಳಬೇಕಾಗಿದ್ದ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವುದು ದುರದೃಷ್ಟವೇ ಸರಿ.

https://www.youtube.com/watch?v=lvZEGrYswyk

Share This Article
Leave a Comment

Leave a Reply

Your email address will not be published. Required fields are marked *