ಯಾದಗಿರಿ: ಬುದ್ದಿ ಮಾತು ಹೇಳಿದ ಎಂದು ಕೋಪಗೊಂಡ ಅಣ್ಣ, ತಮ್ಮನನ್ನು ಕೊಂದಿರುವ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಂಪಾಡ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ತಮ್ಮ ದೇವಿಂದ್ರ ಚವ್ಹಾಣ್(28)ನನ್ನು ಅಣ್ಣ ಜಯರಾಮ್ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಹುಸಿ ಬಾಂಬ್ ಕರೆ ಮಾಡಿದ ಬಾಲಕ
ನಡೆದಿದ್ದೇನು?
ಜಯರಾಮ್ ಹಾಗೂ ದೇವಿಂದ್ರ ಸಹೋದರರು ಯುಗಾದಿ ಹಿನ್ನೆಲೆ ಊರಿಗೆ ಬಂದಿದ್ದರು. ಈ ವೇಳೆ ಭಾನುವಾರ ರಾತ್ರಿ ದೇವಿಂದ್ರ ಹಾಗೂ ಜಯರಾಮ ನಡುವೆ ಜಗಳ ಪ್ರಾರಂಭವಾಗಿದೆ. ಈ ವೇಳೆ ದೇವಿಂದ್ರ ಜಮ್ಲಾನಾಯಕ ಮಕ್ಕಳ ಸಹವಾಸ ಮಾಡಬೇಡ ಎಂದು ಜಯರಾಮ್‍ಗೆ ಬುದ್ದಿ ಹೇಳಿದ್ದಾನೆ.
ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಜಯರಾಮ್ ಕುಟುಂಬಸ್ಥರ ಮುಂದೆಯೇ ದೇವಿಂದ್ರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೆಪ್ ಆಗಿದ್ದಾನೆ. ಪ್ರಸ್ತುತ ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ
ಗುರಮಠಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



