ಬೆಂಗಳೂರು: ತಂಗಿಯನ್ನು ಚುಡಾಯಿಸಬೇಡ ಎಂದು ವಾರ್ನಿಂಗ್ ನೀಡಿದ್ದ ಅಣ್ಣನನ್ನೇ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ರಾಜಧಾನಿ ಬ್ಯಾಟರಾಯನಪುರದಲ್ಲಿ ನಡೆದಿದೆ.
ಮಂಜು ಕೊಲೆಯಾದ ದುರ್ದೈವಿ ಅಣ್ಣ. ಮೃತ ಮಂಜುವಿನ ತಂಗಿಯನ್ನು ಮುರುಗೇಶ್ ಎನ್ನುವ ವ್ಯಕ್ತಿ ಪ್ರತಿನಿತ್ಯ ರೇಗಿಸುತ್ತಿದ್ದ. ಒಂದು ದಿನ ಮುರುಗೇಶ್ ರೇಗಿಸುತ್ತಿರುವಾಗಲೇ ಮಂಜು ಎಂಟ್ರಿ ಆಗಿ ಹಲ್ಲೆ ನಡೆಸಿದ್ದ. ಬಳಿಕ ನನ್ನ ತಂಗಿಯನ್ನು ಚುಡಾಯಿಸ ಬೇಡ ಎಂದು ವಾರ್ನಿಂಗ್ ಕೊಟ್ಟು ಕಳುಹಿಸಿದ್ದ.
ಹಲ್ಲೆಗೊಳಗಾದ ಮುರುಗೇಶ್ ತನ್ನ ಮರ್ಯಾದೆಯನ್ನು ಜನರ ಮುಂದೆ ತೆಗೆದಿದ್ದಾನೆಂದು ಸಿಟ್ಟಿಗೆದ್ದು, ತನ್ನ ಕುಟುಂಬಸ್ಥರೊಂದಿಗೆ ಸೇರಿ ಮಂಜುವನ್ನು ಕೊಲೆ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮುರಗೇಶ್ ಸೇರಿದಂತೆ ಆತನ ಪತ್ನಿ ಶಶಿಕಲಾ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv