ಮುಂಬೈ: ಕೊರೊನಾ ಸೋಂಕುನಿಂದ ಅಣ್ಣ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಹೋದರ ಅತ್ತಿಗೆಯನ್ನು ಮದುವೆಯಾಗಿದ್ದು, ವಿಧವೆಗೆ ಬಾಳು ಕೊಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಅಹಮದ್‍ನಗರದ ಅಕೋಲೆ ತಾಲೂಕಿನಲ್ಲಿ ಈ ಆದರ್ಶ ವಿವಾಹ ನಡೆದಿದೆ. ಅಕೋಲೆ ತಾಲೂಕಿನ ಧೋಕ್ರಿಯ 31 ವರ್ಷದ ನೀಲೇಶ್ ಶೇಟೆ ಕೋವಿಡ್‍ನಿಂದಾಗಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದ್ದರು. ಈತನ ಸಾವಿನಿಂದಾಗಿ ಹೆಂಡತಿ, ಮಗಳು ಬೀದಿಗೆ ಬೀಳುತ್ತಾರೆ. 19 ತಿಂಗಳ ಮಗಳು ಹಾಗೂ ಪತ್ನಿ ಪೂನಂ ನೋಡಿಕೊಳ್ಳುವವರು ಯಾರೂ ಇಲ್ಲದಂತಾಗುತ್ತದೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ
Advertisement
Advertisement
ಕೋವಿಡ್‍ನಿಂದ ನೀಲೇಶ್ ಸಾವನ್ನಪ್ಪುತ್ತಿದ್ದಂತೆ ಆತನ ಸಹೋದರ ಸಮಾಧಾನ್ 23 ವರ್ಷದ ಪೂನಂ ಜೊತೆ ಮರು ವಿವಾಹ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸುತ್ತಾರೆ. ಗ್ರಾಮದ ಹಿರಿಯರು, ಎರಡು ಕುಟುಂಬದವರು ಮದುವೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಸರಳ ಮದುವೆ ಸಮಾರಂಭ ನಡೆದಿದೆ. ಅಕೋಲಾದ ಖಂಡೋಬಾ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದ್ದು, 26 ವರ್ಷದ ಸಮಾಧಾನ್ ಇದೀಗ ಪೂನಂ ಜೊತೆ ಸಪ್ತಪದಿ ತುಳಿದಿದ್ದಾರೆ