– ಪಾಟ್ನಾ ಬದಲು ಜೈಪುರ ಟ್ರೈನ್ ಹತ್ತಿ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ
– ಜೈಪುರದಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿದಾಗ ಸಹಾಯ ಮಾಡಲು ನಿರಾಕರಣೆ
ಜೈಪುರ: ಕೊರೊನಾ ವೈರಸ್‍ನಿಂದಾಗಿ ಇಡೀ ದೇಶ ಲಾಕ್‍ಡೌನ್ ಆಗಿದೆ. ಎಲ್ಲರೂ ತಮ್ಮ ಮನೆಯಲ್ಲಿ ಬಂಧಿಯಾಗಿದ್ದಾರೆ. ಈ ನಡುವೆ ಸಹೋದರನೊಬ್ಬ ತನ್ನ ತಂಗಿಯನ್ನು ಕರೆದುಕೊಂಡು ಬರಲು 1000 ಕಿ.ಮೀ ಬೈಕಿನಲ್ಲಿ ಹೋದ ಸುದ್ದಿಯೊಂದು ವೈರಲ್ ಆಗುತ್ತಿದೆ.
ಅಸ್ಮಿತಾ ತನ್ನ ನಾಲ್ಕು ವರ್ಷದ ಮಗುವಿನ ಜೊತೆ ರೈಲು ಹತ್ತಿದ್ದಳು. ಅಸ್ಮಿತಾ ಪಾಟ್ನಾಗೆ ಹೋಗಬೇಕಿತ್ತು. ಆದರೆ ಆಕೆ ಪಾಟ್ನಾ ರೈಲು ಹತ್ತುವುದರ ಬದಲು ಜೈಪುರ ರೈಲು ಹತ್ತಿದ್ದಾಳೆ. ಜೈಪುರದಲ್ಲಿ ಇಳಿದ ತಕ್ಷಣ ಆಕೆ ಸಹಾಯ ಕೇಳಲು ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ಆದರೆ ಕೊರೊನಾ ಭಯದಿಂದ ಮಹಿಳೆಗೆ ಸಹಾಯ ಮಾಡಲು ಯಾರು ಮುಂದಾಗಲಿಲ್ಲ. ಈ ವಿಷಯ ಮಹಿಳೆಯ ಅಣ್ಣನಿಗೆ ಗೊತ್ತಾಗುತ್ತಿದ್ದಂತೆ ಅವರು ತನ್ನ ಬೈಕಿನಲ್ಲಿ ತಂಗಿಯನ್ನು ಕರೆದುಕೊಂಡು ಬಂದಿದ್ದಾರೆ.
Advertisement
Advertisement
ಪಾಟ್ನಾ ನಿವಾಸಿಯಾಗಿರುವ ಅಸ್ಮಿತಾ ಮಾರ್ಚ್ 22ರ ಮೊದಲೇ ತನ್ನ ನಾಲ್ಕು ವರ್ಷದ ಮಗುವಿನ ಜೊತೆ ತವರು ಮನೆಗೆ ಬಂದಿದ್ದಳು. 22ರಂದು ಅಸ್ಮಿತಾ ಪಾಟ್ನಾದಲ್ಲಿರುವ ತನ್ನ ಮನೆಗೆ ಹೊರಟ್ಟಿದ್ದಳು. ಇದಕ್ಕಾಗಿ ಆಕೆಯ ಕುಟುಂಬಸ್ಥರು ಟ್ರೈನ್ ಟಿಕೆಟ್ ಬುಕ್ ಮಾಡಿದ್ದರು. ವರದಿಗಳ ಪ್ರಕಾರ, ಅಸ್ಮಿಕಾ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ‘ಬಾಗ್‍ಮಿತ್ ಎಕ್ಸ್ ಪ್ರೆಸ್’ ಟ್ರೈನಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಆಕೆ ‘ಮೈಸೂರು-ಜೈಪುರ ಎಕ್ಸ್ ಪ್ರೆಸ್’ ರೈಲಿನಲ್ಲಿ ಹತ್ತಿದ್ದಳು.
Advertisement
Advertisement
ಅಸ್ಮಿತಾ ತಾನು ತಪ್ಪು ರೈಲು ಹತ್ತಿದ್ದೀನಿ ಎಂದು ಅರಿವಾಗುವಷ್ಟರಲ್ಲಿ ಆಕೆ ಜೈಪುರ ಸ್ಟೇಷನ್ ತಲುಪಿದ್ದಳು. ರೈಲ್ವೆ ನಿಲ್ದಾಣದಲ್ಲಿ ಆಕೆ ಇಳಿಯುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಸಹಾಯ ಕೇಳಿದ್ದಾಳೆ. ಆಗ ಸಿಬ್ಬಂದಿ ಆಕೆಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಅಲ್ಲದೆ ಆಕೆಯನ್ನು ವಿಶ್ರಾಂತಿ ರೂಮಿನಲ್ಲಿ ಕೂರಿಸಿ ಊಟ ನೀಡಿದರು. ಈ ವೇಳೆ ಅಸ್ಮಿತಾ ಜೈಪುರದಲ್ಲಿರುವ ತನ್ನ ಸಂಬಂಧಿಕರಿಗೆ ಸಹಾಯ ಕೇಳಿದ್ದಾಳೆ. ಆದರೆ ಕೊರೊನಾ ಭಯದಿಂದ ಸಂಬಂಧಿಕರು ಸಹಾಯ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸಂಬಂಧಿಕರು ಸಹಾಯ ಮಾಡಲು ನಿರಾಕರಿಸುತ್ತಿದ್ದಂತೆ ಮಹಿಳೆ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕೊರೊನಾದಿಂದ ಎಲ್ಲಾ ರೈಲು ಹಾಗೂ ಬಸ್‍ಗಳನ್ನು ರದ್ದುಗೊಳಿಸಲಾಗಿತ್ತು. ಹೀಗಿರುವಾಗ ಸಹೋದರ ತನ್ನ ತಂಗಿಯನ್ನು ಕರೆತರಲು ಬೈಕಿನಲ್ಲೇ ಪ್ರಯಾಣಿಸಿದ್ದಾರೆ. ಸಹೋದರ ನಾಗ್ಪುರದಿಂದ 1000 ಕಿ.ಮೀ ದೂರದಲ್ಲಿರುವ ಜೈಪುರದವರೆಗೂ ಬೈಕಿನಲ್ಲಿ ತೆರಳಿ ತನ್ನ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ನಾಗ್ಪುರದಿಂದ ಜೈಪುರಕ್ಕೆ 30 ಗಂಟೆ ಪ್ರಯಾಣಿಸಬೇಕಾಗುತ್ತದೆ.