ರಾಯಚೂರು: ತಮ್ಮನ ಪ್ರೇಮ ಪ್ರಕರಣದಿಂದ ಬೇಸತ್ತ ಅಣ್ಣ ಮೊಬೈಲ್ ಟವರ್ (Mobile Tower) ಏರಿ ಕುಳಿತ ಪ್ರಸಂಗವೊಂದು ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಮಾನ್ವಿ ಪಟ್ಟಣದ ಕುಂಬಾರ ಓಣಿಯಲ್ಲಿ ಈ ಘಟನೆ ನಡೆದಿದೆ. ಟವರ್ ಏರಿದ ಯುವಕನನ್ನು ಅಮ್ಜದ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಸುಮಾರು ಒಂದು ಗಂಟೆ ಕಾಲ ಟವರ್ ನಲ್ಲೇ ಕಾಲ ಕಳೆದಿದ್ದಾನೆ.
ಟವರ್ ಏರಿದ್ದು ಯಾಕೆ..?: ಅಮ್ಜದ್ ಖಾನ್ ಸಹೋದರ ಶೋಯಲ್ ಖಾನ್ ತಮ್ಮದೇ ಸಮುದಾಯದ ಯುವತಿಯನ್ನ ಪ್ರೀತಿಸುತ್ತಿದ್ದನು. ಹಲವು ದಿನಗಳಿಂದ ಶೋಯಲ್ ಖಾನ್ ಪ್ರೀತಿಸಿದ ಯುವತಿ ಜೊತೆ ಮದುವೆ ಮಾಡಿಸುವಂತೆ ಮನೆಯವರನ್ನು ಪೀಡಿಸುತ್ತಿದ್ದನು. ತಮ್ಮನ ಮದುವೆ ವಿಚಾರವಾಗಿ ಪರಿಚಯಸ್ಥರು, ಸಮುದಾಯದವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಬಾಂಗ್ಲಾ – ಭಾರತಕ್ಕೆ 257 ರನ್‌ಗಳ ಗುರಿ
ಈ ನಡುವೆ ಕಳೆದ ಹತ್ತು ದಿನಗಳಿಂದ ಯುವಕ-ಯುವತಿ ನಾಪತ್ತೆಯಾಗಿದ್ದರು. ಇದರಿಂದ ಬೇಸತ್ತ ಅಮ್ಜದ್ ಖಾನ್, ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಟವರ್ ಏರಿ ಕುಳಿತಿದ್ದಾನೆ. ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿ ಮನವೊಲಿಕೆ ಮಾಡಿದರೂ ಆತ ಕೆಳಗಿಳಿಯಲಿಲ್ಲ. ಕೊನೆಗೆ ಮಾನ್ವಿ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಿ ಟವರ್ ನಿಂದ ಕೆಳಗಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]