ಹಾಸನ: ಆಸ್ತಿಗಾಗಿ ಸ್ವಂತ ಅಣ್ಣನೇ ತಂಗಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನಡೆದಿದೆ.
ಲತಾ(38) ಗಂಭೀರವಾಗಿ ಗಾಯಗೊಂಡಿರುವ ತಂಗಿ. ಲತಾ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇದೀಗ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಅಣ್ಣ ಚಂದ್ರಶೇಖರ್ ಪರಾರಿಯಾಗಿದ್ದಾನೆ.
Advertisement
ಲತಾ ಅದೇ ಗ್ರಾಮ ಪ್ರೇಮಾನಂದ ಜೊತೆ ಲವ್ ಮ್ಯಾರೇಜ್ ಆಗಿದ್ದರು. ತವರು ಮನೆಯೊಂದಿಗೆ ಸಂಪರ್ಕ ಇರಲಿಲ್ಲ. ಆದರೆ ಆಸ್ತಿಯಲ್ಲಿ ಪಾಲು ಬಯಸಿ ಇತ್ತೀಚೆಗೆ ಕೋರ್ಟ್ ಮೆಟ್ಟಿಲೇರಿದ್ದರು. ಚಂದ್ರಶೇಖರ್ ಗೆ ಕೋರ್ಟ್ ನಿಂದ ನೋಟೀಸ್ ಜಾರಿಯಾಗಿತ್ತು.
Advertisement
ಇದರಿಂದ ಆಕ್ರೋಶಗೊಂಡ ಚಂದ್ರಶೇಖರ್ ಮೊದಲು ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ಮುಖ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಇದೀಗ ಪರಾರಿಯಾಗಿದ್ದಾನೆ. ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.