ಹಾವೇರಿ: ತಂದೆಯ ಸಾವಿನ ನೋವಿನಲ್ಲೂ ಅಣ್ಣ ತಂಗಿ ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆ ಬರೆದ ಘಟನೆ ಹಾವೇರಿ(Haveri) ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.
ಪದ್ಮಾವತಿಪುರ ತಾಂಡಾ ನಿವಾಸಿಗಳಾಗಿರುವ ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ರಾಣೇಬೆನ್ನೂರು ನಗರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಇದನ್ನೂ ಓದಿ: 25ನೇ ವೆಡ್ಡಿಂಗ್ ಆನಿವರ್ಸರಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದು ಹೃದಯಾಘಾತದಿಂದ ಸಾವು
ಇಂದು ಎಸ್‌ಎಸ್‌ಎಲ್‌ಸಿಯ ಕೊನೆಯ ಪರೀಕ್ಷೆ ಇತ್ತು. ಬೆಳಗ್ಗೆ ತಂದೆ ಹನುಮಂತಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮನೆಯಲ್ಲಿ ತಂದೆ ಮೃತಪಟ್ಟಿದ್ದರೂ ಸಹ ನಗರದ ಪರೀಕ್ಷೆ ಕೇಂದ್ರಕ್ಕೆ ತೆರಳಿ ಕೊನೆಯ ಹಿಂದಿ ಪರೀಕ್ಷೆ ಬರೆದಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ಜಾಗ ಕೊಟ್ಟ ರೈತರಿಗೆ 60 ವರ್ಷದಿಂದ ಸಿಗದ ಪರಿಹಾರ – ಡಿಹೆಚ್‍ಓ ಕಾರು ಜಪ್ತಿ
ಎಲ್ಲಾ ಪರೀಕ್ಷೆಗಳಿಗೆ ತಂದೆಯೇ ಪರೀಕ್ಷಾ ಕೇಂದ್ರದವರೆಗೆ ಹೋಗಿ ಮಕ್ಕಳನ್ನ ಬಿಟ್ಟುಬರುತ್ತಿದ್ದರು. ಆದರೆ ಏಕಾಏಕಿ ಹೃದಯಾಘಾತದಿಂದ ಇಂದು ಬೆಳಗ್ಗೆ ಹನುಮಂತಪ್ಪ ಸಾವನ್ನಪ್ಪಿದ್ದಾರೆ. ವಿದ್ಯಾ ಕುಟುಂಬ ಸದಸ್ಯರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.