– ಲಂಡನ್ ಪ್ರವಾಸಕ್ಕೆ ಹೊರಟಿದ್ದ ಅಣ್ಣ-ತಂಗಿ ದುರಂತ ಅಂತ್ಯ
ಗಾಂಧೀನಗರ: ಅಹಮದಾಬಾದ್ನಲ್ಲಿ (Ahmedabad) ಸಂಭವಿಸಿದ ಏರ್ ಇಂಡಿಯಾ (Air India) ವಿಮಾನ ಅಪಘಾತದ ಹಿಂದೆ ಹಲವು ಕರುಣಾಜನಕ ಕಥೆಗಳಿವೆ. ಪತನಗೊಂಡ ವಿಮಾನದಲ್ಲಿ ಲಂಡನ್ಗೆ ಪ್ರಯಾಣ ಬೆಳೆಸಿದ್ದ ಅಣ್ಣ-ತಂಗಿ ದುರಂತ ಅಂತ್ಯ ಕಂಡಿದ್ದಾರೆ.
ಅಣ್ಣ ಶಗುನ್ ಮತ್ತು ತಂಗಿ ಶುಭಾ ಇಬ್ಬರೂ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಉದಯಪುರದವರಾಗಿ ಇವರು ಎಂಬಿಎ ಮುಗಿಸಿದ್ದರು. ಮಾರ್ಬಲ್ ವ್ಯಾಪಾರಿ ಪಿಂಕು ಮೋದಿ ಅವರ ಮಕ್ಕಳು. ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ
ತಂದೆ ಜೊತೆ ಮಾರ್ಬಲ್ ಬ್ಯುಸಿನೆಸ್ಗೆ ಸೇರಿದ್ದರು. ಅಣ್ಣ-ತಂಗಿ ಇಬ್ಬರೂ ಲಂಡನ್ ಪ್ರವಾಸಕ್ಕೆ ಹೊರಟಿದ್ದರು. ಆದರೆ, ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
230 ಪ್ರಯಾಣಿಕರು, 12 ಸಿಬ್ಬಂದಿ ಹೊತ್ತು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್ಲೈನರ್ ವಿಮಾನ ಗುರುವಾರ ಪತನಗೊಂಡಿತು. ಪ್ರಯಾಣ ಆರಂಭಿಸಿದ ಕೆಲಹೊತ್ತಿನಲ್ಲೇ ಹಾಸ್ಟೆಲ್ವೊಂದಕ್ಕೆ ಡಿಕ್ಕಿ ಹೊಡೆದು ವಿಮಾನ ಪತನವಾಯಿತು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ವಿಷಾದ
ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದಾರೆ. ಪವಾಡ ಸದೃಶ ರೀತಿಯಲ್ಲಿ ಓರ್ವ ಮಾತ್ರ ದುರಂತದಿಂದ ಪಾರಾಗಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.