– ಪೊಲೀಸರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ
ಬಳ್ಳಾರಿ: ರೈತರು ಬರಗಾಲದಲ್ಲಿ ಕಷ್ಟಪಟ್ಟು ಬೆಳದಿದ್ದ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದ ವ್ಯಾಪಾರಿಯೊಬ್ಬ ಹಣ ನೀಡದೇ ಮೋಸ ಮಾಡಿದ್ದಾನೆ. ರೈತರಿಗೆ ಹಣ ನೀಡಬೇಕೆಂದು ಪೊಲೀಸರು ಹೇಳಿದರೇ ಅವರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ ಹಾಕಿದ್ದಾನೆ.
Advertisement
ಹಿರೇಹೆಗ್ಡಾಳ ಗ್ರಾಮ ಪಂಚಾಯತಿ ಸದಸ್ಯ, ದಲ್ಲಾಳಿ ಚಂದ್ರಪ್ಪ ಎಂಬವನೇ ರೈತರಿಗೆ ಹಣ ನೀಡದೇ ಸತಾಯಿಸುತ್ತಿರುವ ವ್ಯಕ್ತಿ. ಜಿಲ್ಲೆಯ ಕೂಡ್ಲಗಿ ತಾಲೂಕಿನ ಇಚಲ, ಬೊಮ್ಮನಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನೂರಾರು ರೈತರ ಬಳಿ ಮೆಕ್ಕೆಜೋಳ ಖರೀದಿಸಿ ವ್ಯಾಪಾರಿ ಇದೂವರೆಗೂ ರೈತರಿಗೆ ಹಣ ನೀಡಿಲ್ಲ.
Advertisement
Advertisement
ಚಂದ್ರಪ್ಪ ಕಲೆ ರೈತರಿಗೆ ಚೆಕ್ ನೀಡಿದ್ದಾನೆ.ಆದರೆ ಚಂದ್ರಪ್ಪ ನೀಡಿರುವ ಎಲ್ಲ ಚೆಕ್‍ಗಳು ಬೌನ್ಸ್ ಆಗಿವೆ. ಹೀಗಾಗಿ ಹಣ ಕೊಡಿಸುವಂತೆ ರೈತರು ಪೊಲೀಸ ಠಾಣೆ ಮೇಟ್ಟಿಲೇರಿದ್ರೆ, ಚಂದ್ರಪ್ಪ ಇದೀಗ ಪೊಲೀಸರನ್ನೆ ಬೆದರಿಸುತ್ತಿದ್ದಾನೆ. ರೈತರ ಹಣ ಕೊಡುವಂತೆ ತಾಕೀತೂ ಮಾಡಿದ ಕೂಡ್ಲಗಿ ಡಿವೈಎಸ್‍ಪಿ ತಮಗೆ ಕಿರುಕುಳ ನೀಡಿದ್ರೂ ಅಂತಾ ಪೊಲೀಸರ ವಿರುದ್ಧವೇ ವ್ಯಾಪಾರಿ ಚಂದ್ರಪ್ಪ ಡೆತ್‍ನೋಟ್ ಬರೆದಿಟ್ಟು ಪೊಲೀಸರನ್ನು ಬೆದರಿಸುತ್ತಿದ್ದಾನೆ.
Advertisement
ರೈತರಿಂದ ಮೆಕ್ಕಜೋಳ ಖರೀದಿಸಿ ಹಣ ಕೊಡದೆ ಪೊಲೀಸರನ್ನೆ ಬೆದರಿಸುತ್ತಿರುವ ಚಂದ್ರಪ್ಪನಿಂದ ಹಣ ಪಡೆಯೋದೇಗೆ ಅಂತಾ ರೈತರು ಇದೀಗ ಕಂಗಾಲಾಗಿದ್ದಾರೆ. ಇತ್ತ ರೈತರು ನಮಗೆ ಹಣ ಕೊಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.