ನವದೆಹಲಿ: ವಿರಾಟ್ ಕೊಹ್ಲಿಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಿಂದ ವಿಶ್ರಾಂತಿ ನೀಡಿದ ಹಿನ್ನೆಲೆಯಲ್ಲಿ ಸ್ಟಾರ್ ನೆಟ್‍ವರ್ಕ್ ವಾಹಿನಿ ಏಷ್ಯಾ ಕ್ರಿಕೆಟ್ ಮಂಡಳಿ(ಎಸಿಸಿ) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದ ಬೆನ್ನಲ್ಲೇ ಬಿಸಿಸಿಐ ವಾಹಿನಿಗೆ ಖಡಕ್ ಎಚ್ಚರಿಕೆ ನೀಡಿದೆ.
ಸ್ಟಾರ್ ನೆಟ್‍ವರ್ಕ್ ಸಂಸ್ಥೆಯೂ ಬಿಸಿಸಿಐ ಪಂದ್ಯಗಳ ಪ್ರಸಾರ ಹಕ್ಕು ಪಡೆದಿರುವುದು ಎಲ್ಲರಿಗೂ ತಿಳಿದ ವಿಚಾರ. ಕೊಹ್ಲಿ ಬ್ಯಾಟಿಂಗ್ ನಡೆಸುವ ಸಂದರ್ಭದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಈ ಏಷ್ಯಾ ಕಪ್ ನಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವುದರಿಂದ ಭಾರೀ ನಷ್ಟವಾಗಲಿದೆ. ಈ ಕುರಿತು ಸ್ಟಾರ್ ನೆಟ್‍ವರ್ಕ್ ಸಂಸ್ಥೆ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸದ್ಯ ವಾಹಿನಿ ಅಸಮಾಧಾನಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಸಂಸ್ಥೆಯ ಅಂತರಿಕ ವಿಚಾರಕ್ಕೆ ತಲೆಹಾಕದಂತೆ ತಿಳಿಸಿದೆ.
Advertisement
Advertisement
ಈ ಮಧ್ಯೆ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಕೂಡ ಕೊಹ್ಲಿ ಗೈರು ಹಾಜರಿ ಟೂರ್ನಿಯ ಮೇಲೆ ಬೀರುವ ಪರಿಣಾಮವನ್ನು ವಿವರಿಸಿದೆ. ಎಸಿಸಿ ಆಯೋಜಕ ಮ್ಯಾನೇಜರ್ ಪೆರೆರಾ ಈ ಕುರಿತು ವಿವರಣೆ ನೀಡಿ ಬಿಸಿಸಿಐಗೆ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಏಷ್ಯಾಕಪ್ ನಿಂದ ವಿಶ್ವದ ಬೆಸ್ಟ್ ಬ್ಯಾಟ್ಸ್ ಮನ್ ರನ್ನು ಹೊರಗಿಡುತ್ತಿರುವ ವಿಚಾರ ಕೇವಲ ಟೂರ್ನಿಗೆ 15 ದಿನ ಮಾತ್ರ ಬಾಕಿ ಇರುವ ವೇಳೆ ಬಿಸಿಸಿಐ ಆಯ್ಕೆ ಪ್ರಕಟಿಸಿತ್ತು. ಇದರಿಂದ ಟೂರ್ನಿಯ ಗುಣಮಟ್ಟ ಹಾಗೂ ಜಾಹೀರಾತಿನ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಿದೆ ಎಂದು ಬಿಸಿಸಿಐ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದಕ್ಕೂ ಮುನ್ನ ಸ್ಟಾರ್ ವಾಹಿನಿ ಎಸಿಸಿ ಎದುರು ತನ್ನ ಅಸಮಾಧಾನ ಹೊರ ಹಾಕಿತ್ತು.
Advertisement
Advertisement
ಇತ್ತ ಟೂರ್ನಿಯಲ್ಲಿ ಗುಣಮಟ್ಟದ ಸ್ಪರ್ಧೆ ನಡೆಸುವ ಕುರಿತು ಆಶ್ವಾಸನೆ ನೀಡಿದ್ದ ಎಸಿಸಿ ತನ್ನ ಮಾತು ಉಳಿಸಿಕೊಳ್ಳಲಾಗದೇ ಸಂಕಷ್ಟ ಎದುರಿಸಿದೆ. ಇತ್ತ 84 ದಿನಗಳ ದೀರ್ಘ ಅವಧಿಯ ಇಂಗ್ಲೆಂಡ್ ಟೂರ್ನಿಯಲ್ಲಿ ಭಾಗವಹಿಸಿದ್ದ ಕೊಹ್ಲಿ ಇಂಗ್ಲೆಂಡ್ ಟೂರ್ನಿಯಲ್ಲಿ ಟಾಪ್ ರನ್ನರ್(593) ಆಗಿದ್ದರು. ಆದರೆ ಬಳಿಕ ಬಿಸಿಸಿಐ ಆಯ್ಕೆ ಸಮಿಸಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಕೊಹ್ಲಿ ಮೇಲೆ ಉಂಟಾಗುತ್ತಿರುವ ಒತ್ತಡ ಅರಿತು ಅವರಿಗೆ ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ನೀಡುತ್ತಿರುವುದಾಗಿ ತಿಳಿಸಿದ್ದರು.
ಎಸಿಸಿ ಪತ್ರಕ್ಕೆ ಉತ್ತರಿಸಿರುವ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ಟೂರ್ನಿಯ ಲಭ್ಯವಿರುವ ಆಟಗಾರರಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಬಿಸಿಸಿಐ ಆಯ್ಕೆ ಸಮಿತಿಯ ಬಹುಮುಖ್ಯ ಆಧ್ಯತೆ ಆಗಿರುತ್ತದೆ. ಅಲ್ಲದೇ ತಂಡದ ಆಯ್ಕೆಯಂತಹ ಅಂತರಿಕ ವಿಚಾರದಲ್ಲಿ ಎಸಿಸಿ ಅಥವಾ ಯಾವುದೇ ಪ್ರಸಾರ ಸಂಸ್ಥೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv