– ಪ್ಲೀಸ್, ಪ್ಲೀಸ್ ಪ್ಲೀಸ್.. ಹೊರಗಡೆ ಹೋಗುವುದನ್ನು ನಿಲ್ಲಿಸಿ
– ಉಳಿದ ಜೀವಗಳನ್ನು ರಕ್ಷಿಸಿ
ಲಂಡನ್: ಈಡಿಯಟ್‍ಗಳಂತೆ ನಗರ ಸುತ್ತಲು ಹೋಗಬೇಡಿ. ಮನೆಯಲ್ಲೇ ಇದ್ದು ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಹೇಳಿ ಇಂಗ್ಲೆಂಡಿನಲ್ಲಿ 39 ವರ್ಷ ವ್ಯಕ್ತಿಯೊಬ್ಬರು ಕೊರೊನಾಗೆ ಮೃತಪಟ್ಟಿದ್ದಾರೆ.
ಬಕಿಂಗ್‍ಹ್ಯಾಮ್‍ನ ಮ್ಯಾಟ್ ಡೊಕ್ರೆ ಅವರು ಪತ್ನಿ ಮತ್ತು ಮಗುವಿಗೆ ವಿಡಿಯೋ ಸಂದೇಶ ಕಳುಹಿಸಿ ಮೃತಪಟ್ಟಿದ್ದಾರೆ. ಮೃತಪಡುವ ಮುನ್ನ ಫೇಸ್‍ಬುಕ್ ನಲ್ಲಿ ಭಾವನಾತ್ಮಕವಾಗಿ ತನ್ನ ನೋವನ್ನು ತೋಡಿಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಅನ್ನು 23 ಸಾವಿರ ಮಂದಿ ಶೇರ್ ಮಾಡಿದ್ದು, 7 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ.
Advertisement
ಮಾರ್ಚ್ 1 ರಂದು ಡೊಕ್ರೆ ಅವರಿಗೆ ಸಣ್ಣ ಕಫ ಬಂದಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Advertisement
ಕುಟುಂಬದ ಜೊತೆ ಕೊನೆಯ ಬಾರಿಗೆ ಮಾಡಿದ ವಿಡಿಯೋ ಕರೆಯಲ್ಲಿ ತಾನು ಮುಂದೆ ಬದುಕುವುದು ಕಷ್ಟ ಎಂದು ಹೇಳಿದ ಮ್ಯಾಟ್ ಡೊಕ್ರೆ, ಇಂಗ್ಲೆಂಡಿನ ಜನ ಇಡಿಯಟ್‍ಗಳಂತೆ ನಗರದಲ್ಲಿ ಸುತ್ತಾಡುತ್ತಿದ್ದಾರೆ. ದಯವಿಟ್ಟು ನಗರದಲ್ಲಿ ಸುತ್ತಾಡಬೇಡಿ. ಸರ್ಕಾರದ ಸೂಚನೆಗಳನ್ನು ಪಾಲಿಸಿ ಮನೆಯಲ್ಲೇ ಇರಿ ಎಂದು ಮನವಿ ಮಾಡಿ ಗುಡ್‍ಬೈ ಹೇಳಿದ್ದಾರೆ.
Advertisement
"He's far from well."
The father of a #coronavirus patient shares an update on his son's health.
Matt Dockray – aged just 39 – is in intensive care and has urged the public to 'stop going out and save some lives'.
Live #COVID19 updates ???? https://t.co/SwvtJwS70w pic.twitter.com/ekHTWp8hiu
— Sky News (@SkyNews) March 23, 2020
Advertisement
ವಿಶೇಷ ಏನೆಂದರೆ ಅವರು ಚಿಕಿತ್ಸೆಯಿಂದ ಬದುಕಬಹುದು ಎಂದೇ ನಿರೀಕ್ಷಿಸಲಾಗಿತ್ತು. ಸ್ವಲ್ಪ ಆರೋಗ್ಯ ಸಹ ಚೇತರಿಕೆಯಾಗಿತ್ತು. ಆದರೆ ಈಗ ಅವರು ಮೃತಪಟ್ಟಿದ್ದಾರೆ. ಮೃತಪಡುವುದಕ್ಕೂ ಮುನ್ನ ಅವರು ಫೇಸ್‍ಬುಕ್ ನಲ್ಲಿ “ಪ್ಲೀಸ್, ಪ್ಲೀಸ್ ಪ್ಲೀಸ್.. ಹೊರಗಡೆ ಹೋಗುವುದನ್ನು ನಿಲ್ಲಿಸಿ ಮತ್ತು ಉಳಿದ ಜೀವಗಳನ್ನು ರಕ್ಷಿಸಿ” ಹೆಡ್‍ಲೈನ್ ಹಾಕಿ ಭಾವನಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ನಾನು ಒಂದು ಪ್ರಮುಖ ಕಾರಣಕ್ಕಾಗಿ ಈ ಪೋಸ್ಟ್ ಬರೆಯುತ್ತಿದ್ದೇನೆ. ಕಳೆದ ಮೂರು ವಾರಗಳಿಂದ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ. ವೆಂಬ್ಲಿ ವಿಲ್ಲಾದಲ್ಲಿದ್ದಾಗ ನನಗೆ ಕಫ ಬಂದಿತ್ತು. ಇದಾದ ಬಳಿಕ ಜ್ವರ ಮತ್ತು ತಲೆನೋವು ಬಂದಿತ್ತು. ದಿನೇ ದಿನೇ ಜೋರಾಗುತ್ತಿದ್ದರೂ ನಾನು ಇದಕ್ಕೆ ಗಮನ ನೀಡಲಿಲ್ಲ. ಕುಟುಂಬದವರು ಸಲಹೆ ನೀಡಿದರೂ ನಾನು ಹೀರೋ ಥರ ಪೋಸ್ ನೀಡುತ್ತಿದ್ದೆ.
ವೈದ್ಯರು ನನ್ನ ಬಳಿ ನೀವು ಚೀನಾಗೆ ಹೋಗಿದ್ದೀರಾ ಎಂದು ಕೇಳಿದರು. ನಾನು ಹೋಗಿಲ್ಲ ಎಂದು ಹೇಳಿದೆ. ಇದಾದ ಬಳಿಕ ನಾನು ಕೆಲವು ರೋಗ ನಿರೋಧಕಗಳನ್ನು ತೆಗೆದುಕೊಂಡೆ. ಇದಾದ 5 ದಿನಗಳ ಕಾಲ ನಾನು ಮಂಚದಿಂದ ಏಳಲೇ ಇಲ್ಲ. ಉಸಿರಾಡಲು ಬಹಳ ಕಷ್ಟವಾಗುತ್ತಿತ್ತು.
ಕೊನೆಗೆ ನನ್ನ ಪತ್ನಿ ನನ್ನ ಮಾತನ್ನು ಕೇಳಲಿಲ್ಲ. ಅಂಬುಲೆನ್ಸ್ ಗೆ ಕರೆ ಮಾಡಿ ವಿಚಾರ ತಿಳಿಸಿದಳು. ಒಂದು ಗಂಟೆಯ ನಂತರ ಮನೆಗೆ ಅಂಬುಲೆನ್ಸ್ ಬಂತು. ನಾನು ಕೋವಿದ್-19 ರೋಗಿಯಾಗಿದ್ದು ನನ್ನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ವೈದ್ಯರು ಸೂಟ್ ಧರಿಸಿಕೊಂಡು ಮನೆಗೆ ಬಂದರು. ಬಳಿಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಮೇಲೆ ಇರಿಸಿದರು.
ವೆಂಟಿಲೇಟರ್ ಇರಿಸಿದ ಬಳಿಕ ನನ್ನ ಹೋರಾಟ ಆರಂಭವಾಯಿತು. ಕೆಲ ದಿನಗಳ ಬಳಿಕ ನನ್ನ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಆಯ್ತು. ಹೀಗಾಗಿ ನಾನು ಈಗ ನನ್ನ ನೋವಿನ ಕಥೆಯನ್ನು ಹೇಳುತ್ತಿದ್ದೇನೆ. ಯಾವುದೇ ಉದ್ದೇಶ ಇಲ್ಲದೇ ಹೊರಗಡೆ ಹೋಗಿ ಆದೇಶವನ್ನು ಉಲ್ಲಂಘಿಸುವ ಮಂದಿಗೆ ತಿಳಿ ಹೇಳಲು ನನಗೆ ಒಂದು ಅವಕಾಶ ಸಿಕ್ಕಿದೆ ಎಂದು ನಾನು ಭಾವಿಸಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ನನಗೆ ಏನು ಆಗುವುದಿಲ್ಲ ಎಂದು ಯಾರು ದಯವಿಟ್ಟು ಆಲೋಚನೆ ಮಾಡಬೇಡಿ. ಈಡಿಯೇಟ್ ಗಳಂತೆ ವರ್ತಿಸಬೇಡಿ. ಈಗಾಗಲೇ ನಾನು ನನ್ನ ಪತ್ನಿ ಮತ್ತು ಮಗುವಿಗೆ ಗುಡ್‍ಬೈ ಹೇಳಿ ಹೇಳಿದ್ದೇನೆ.
39 ವರ್ಷದ ನಾನು ಪೋಸ್ಟರ್ ಬಾಯ್ ಅಲ್ಲ. ಈಗ ನನಗೆ ನನ್ನ ಬರಹ ಮುಗಿಸುವ ಸಮಯ ಬಂದಿದೆ. ಈಗ ನಾನು ಗಂಟೆಗೊಮ್ಮೆ ನನ್ನ ಹತ್ತಿರದ ಕೊಠಡಿಗಳಲ್ಲಿರುವ ಕೋವಿದ್-19 ಸೋಂಕಿಗೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು ನೋಡುತ್ತಿದ್ದೇನೆ. ಈ ರೋಗಿಗಳ ಕುಟುಂಬಸ್ಥರು ಗುಡ್‍ಬೈ ಹೇಳುತ್ತಿರುವುದು ನನಗೆ ಕಾಣುತ್ತಿದೆ.
ನನಗೆ ನೀವು ಸಹಾನುಭೂತಿ ವ್ಯಕ್ತಪಡಿಸಲು ಅಥವಾ ನಿಮ್ಮ ಗಮನ ಸೆಳೆಯಲು ಈ ಬರಹವನ್ನು ನಾನು ಬರೆಯುತ್ತಿಲ್ಲ. ನನ್ನ ಆತ್ಮೀಯರ ಧನಾತ್ಮಕ ಚಿಂತನೆಯಿಂದ ನಾನು ಸ್ವಲ್ಪ ಗುಣಮುಖನಾಗಿದ್ದೇನೆ. ಅವರ ಧೈರ್ಯ ತುಂಬಿದ ಮಾತುಗಳಿಂದ ನನ್ನ ಉಸಿರಾಟ ಹೆಚ್ಚಾಗಿದೆ. ಪ್ರೀತಿ ಪಾತ್ರರಿಗೆ ಆಗುವ ಅಪಾಯವನ್ನು ತಪ್ಪಿಸಲು ಹೊರಗಡೆ ಹೋಗುವುದನ್ನು ನಿಲ್ಲಿಸಿ. ಪ್ರಕೃತಿ ತನ್ನ ಹಾದಿಯನ್ನು ಹಿಡಿಯಲಿ ಎಂದು ಬರೆದು 9 ಬಾರಿ ಕೈ ಮುಗಿದು ಬೇಡಿಕೊಳ್ಳುವ ಇಮೋಜಿ ಹಾಕಿ ಪೋಸ್ಟ್ ಮುಗಿಸಿದ್ದಾರೆ.