ಲಂಡನ್: ಸಾಮಾಜಿಕ ಮಾಧ್ಯಮದ ವೀಡಿಯೋವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ (Seatbelt) ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ಗೆ (British Prime Minister Rishi Sunak) ದಂಡ (Fine)ವಿಧಿಸಲಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ (Moving Car) ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ರಿಷಿ ಸುನಾಕ್ ಅವರಿಗೆ 100 ಪೌಂಡ್ (ಸುಮಾರು 10 ಸಾವಿರ ರೂ.) ದಂಡವನ್ನು ವಿಧಿಸಲಾಗಿದೆ ಎಂದು ಲಂಕಾಶೈರ್ (Lancashire) ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಲಂಕಾಶೈರ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೀಟ್‌ಬೆಲ್ಟ್ ಧರಿಸದೇ ಇರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಬಳಿಕ ನಾವು ಶುಕ್ರವಾರ ಲಂಡನ್‌ನ 42 ವರ್ಷದ ವ್ಯಕ್ತಿಗೆ ಷರತ್ತುಬದ್ಧವಾಗಿ ದಂಡ ವಿಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಓದಿಕೊಳ್ಳುವ ಟೈಂನಲ್ಲಿ ವಾರ್ಡನ್‍ನಿಂದ ಲೈಟ್ಸ್ ಆಫ್ – ಮೊಬೈಲ್ ಟಾರ್ಚ್‍ನಲ್ಲೇ ವಿದ್ಯಾರ್ಥಿನಿಯರಿಂದ ವಿದ್ಯಾಭ್ಯಾಸ
Advertisement
ಗುರುವಾರ ಸುನಾಕ್ ಇಂಗ್ಲೆಂಡ್‌ನ ವಾಯುವ್ಯ ಭಾಗದಲ್ಲಿ ಪ್ರಯಾಣ ಮಾಡುತ್ತಿದ್ದಾಗ ವೀಡಿಯೋವೊಂದನ್ನು ಚಿತ್ರೀಕರಿಸಲು ಸೀಟ್‌ಬೆಲ್ಟ್ ಅನ್ನು ತೆಗೆದಿದ್ದಾರೆ. ತಮ್ಮ ತಪ್ಪಿಗೆ ಅವರು ಬಳಿಕ ಕ್ಷಮೆಯನ್ನೂ ಯಾಚಿಸಿದ್ದಾರೆ. ಅವರು ಎಲ್ಲರಿಗೂ ಸೀಟ್‌ಬೆಲ್ಟ್ ಹಾಕಬೇಕು ಎಂಬುದನ್ನೇ ಹೇಳುತ್ತಾರೆ ಎಂದು ಸುನಾಕ್ ಅವರ ವಕ್ತಾರರು ತಿಳಿಸಿದ್ದಾರೆ.
Advertisement
ವರದಿಗಳ ಪ್ರಕಾರ, ಸುನಾಕ್ ದೇಶದಾದ್ಯಂತ 100 ಕ್ಕೂ ಹೆಚ್ಚು ಯೋಜನೆಗಳಿಗೆ ಹಣ ನೀಡಲು ತನ್ನ ಸರ್ಕಾರದ ಹೊಸ ಲೆವೆಲಿಂಗ್ ಅಪ್ ಫಂಡ್ ಪ್ರಕಟಣೆಗಳನ್ನು ಪ್ರಚಾರ ಮಾಡಲು ಚಲಿಸುವ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ವೀಡಿಯೋವನ್ನು ಚಿತ್ರೀಕರಿಸಿದ್ದಾರೆ. ಅವರು ಕ್ಯಾಮೆರಾವನ್ನು ನೋಡುತ್ತಾ ಮಾತನಾಡುತ್ತಿದ್ದರೆ, ಕಾರಿನ ಹಿಂದುಗಡೆಯಿಂದ ಪೋಲೀಸ್ ಬೈಕ್‌ಗಳು ಅವರ ಕಾರಿಗೆ ಬೆಂಗಾವಲು ಮಾಡುವುದು ಕಾಣಿಸಿಕೊಂಡಿದೆ. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ – 17 ಮೀನುಗಾರರ ರಕ್ಷಣೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k