ಲಂಡನ್: ಚೀನಾದ (China) ವೀಡಿಯೋ ಅಪ್ಲಿಕೇಶನ್ ಟಿಕ್ಟಾಕ್ (TikTok) ಅನ್ನು ಬ್ರಿಟನ್ ಸಂಸತ್ತು (British Parliament) ನಿಷೇಧಿಸಿದೆ.
ಭದ್ರತಾ ಕಾಳಜಿಯ ಹಿನ್ನೆಲೆ ಬ್ರಿಟನ್ ಸಂಸತ್ತು ತನ್ನ ನೆಟ್ವರ್ಕ್ನಲ್ಲಿರುವ ಎಲ್ಲಾ ಸಾಧನಗಳಿಂದಲೂ ಟಿಕ್ಟಾಕ್ ಅನ್ನು ನಿರ್ಬಂಧಿಸಿದೆ. ಈ ಹಿಂದೆಯೇ ಭಾರತ ಇಡೀ ದೇಶದಲ್ಲಿ ಟಿಕ್ಟಾಕ್ ಅನ್ನು ಬ್ಯಾನ್ ಮಾಡಿದೆ. ಇದೀಗ ಬ್ರಿಟನ್ ಸಂಸತ್ತು ಭದ್ರತಾ ಕಾರಣಕ್ಕೆ ಟಿಕ್ಟಾಕ್ ಅನ್ನು ನಿಷೇಧಿಸಿದೆ.
Advertisement
Advertisement
ಹೌಸ್ ಆಫ್ ಕಾಮನ್ಸ್ ಹಾಗೂ ಲಾರ್ಡ್ಸ್ ಎರಡೂ ಆಯೋಗಗಳು ಟಿಕ್ಟಾಕ್ ಅನ್ನು ಎಲ್ಲಾ ಸಂಸದೀಯ ಸಾಧನಗಳು ಹಾಗೂ ಸಂಸದೀಯ ನೆಟ್ವರ್ಕ್ಗಳಿಂದ ನಿರ್ಬಂಧಿಸಲು ನಿರ್ಧರಿಸಿವೆ ಎಂದು ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ. ಆದರೆ ಈ ಕ್ರಮವನ್ನು ಟಿಕ್ಟಾಕ್ ವಕ್ತಾರರು ವಿರೋಧಿಸಿದ್ದು, ಇದು ಕಂಪನಿಗೆ ಕೆಟ್ಟ ಹೆಸರು ತಂದುಕೊಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆಜಾನ್ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ
Advertisement
ಬ್ರಿಟನ್ ಕಳೆದ ವಾರ ಸರ್ಕಾರಿ ಫೋನ್ಗಳಲ್ಲಿ ಚೀನಾದ ಒಡೆತನದ ವೀಡಿಯೊ ಅಪ್ಲಿಕೇಶನ್ ಅನ್ನು ನಿಷೇಧಿಸಿತ್ತು. ಸೈಬರ್ ಭದ್ರತೆಯು ಸಂಸತ್ತಿನ ಪ್ರಮುಖ ಆದ್ಯತೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಅಮೆರಿಕ, ಕೆನಡಾ, ಬೆಲ್ಜಿಯಂ ಹಾಗೂ ಯುರೋಪಿಯನ್ ಕಮಿಷನ್ ಈಗಾಗಲೇ ಸರ್ಕಾರಿ ಸಾಧನಗಳಿಂದ ಈ ಅಪ್ಲಿಕೇಶನ್ ಅನ್ನು ನಿಷೇಧಿಸಿವೆ. ಇದನ್ನೂ ಓದಿ: 2 ವರ್ಷ ಬ್ಯಾನ್ ಬಳಿಕ ಫೇಸ್ಬುಕ್, ಯೂಟ್ಯೂಬ್ಗೆ ಮರಳಿದ ಟ್ರಂಪ್