CrimeInternationalLatest

ಶವಾಗಾರದಲ್ಲಿದ್ದ ಶವದ ಜೊತೆಗೆ ದರೋಡೆಕೋರನ ಸೆಕ್ಸ್!

– ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ

ಲಂಡನ್: ಶವಾಗಾರದಲ್ಲಿದ್ದ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ್ದ ದರೋಡೆಕೋರನಿಗೆ ಇಂಗ್ಲೆಂಡ್ ಕೋರ್ಟ್ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಖಾಸಿಂ ಖುರಾಮ್ (23) ಜೈಲು ಶಿಕ್ಷೆಗೆ ಗುರಿಯಾದ ದರೋಡೆಕೋರ. ಆರೋಪಿಯನ್ನು 2018 ನವೆಂಬರ್ 11ರಂದು ಬಂಧಿಸಲಾಗಿತ್ತು. ಪ್ರಕರಣದ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಬರ್ಮಿಂಗ್‍ಹ್ಯಾಮ್ ಕೋರ್ಟ್ ಖಾಸಿಂಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಖಾಸಿಂ ಅಮಾನವೀಯವಾಗಿ ನಡೆದುಕೊಂಡಿದ್ದಾನೆ ಎಂದ ಅವರು, ಮೂರು ದೇಹಗಳನ್ನು ಕದಡಿದ್ಯಾಕೆ? ಒಂಬತ್ತು ಶವ ಪೆಟ್ಟಿಗೆಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದು ಯಾಕೆ? ನಿಜವಾಗಿಯೂ ನೀನು ಏನು ಮಾಡಿರುವೆ? ಯಾಕೆ ಹೀಗೆ ಮಾಡಿದ್ದು? ಈ ಕೃತ್ಯವನ್ನು ನೀನೊಬ್ಬನೇ ಮಾಡಿದ್ದೀಯಾ ಅಥವಾ ಬೇರೆ ಯಾರಾದ್ರೂ ನಿನ್ನ ಜೊತೆಯಲ್ಲಿದ್ರಾ ಎಂದು ಪ್ರಶ್ನಿಸಿದ್ದರು.

ನನ್ನ ಕಕ್ಷಿದಾರನ ತಪ್ಪನ್ನು ಕ್ಷಮಿಸಿ ಹಾಗೂ ಆತನ ನಿಯಂತ್ರಣ ಮೀರಿ ಘಟನೆ ನಡೆದಿದೆ ಎಂದು ಖಾಸಿಂ ಪರ ವಕೀಲ ವಾದ ಮಂಡಿಸಿದ್ದಾರೆ.

ಏನಿದು ಪ್ರರಕಣ?:
ದರೋಡೆ ಮಾಡಿದ್ದ ಆಭರಣಗಳನ್ನು ಹಿಡಿದುಕೊಂಡು ಆರೋಪಿ ಖಾಸಿಂ ಖುರಾಮ್ ಇಂಗ್ಲೆಂಡ್ ಕೇಂದ್ರ ಕೋ ಆಪರೇಟಿವ್ ಶವಾಗಾರಕ್ಕೆ ತೆರಳಿದ್ದ. ಈ ವೇಳೆ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿದ್ದ ಖಾಸಿಂ ಖುರಾಮ್ ಶವಾಗಾರದಲ್ಲಿದ್ದ ಶವಗಳನ್ನು ನೋಡಿದ್ದಾನೆ. ಅಲ್ಲಿದ್ದ ಮಹಿಳೆಯೊಬ್ಬರ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎರಡು ಶವಗಳ ಬಟ್ಟೆಯನ್ನು ಕೂಡ ಕಳಚಿದ್ದ.

ಸೆಕ್ಸ್ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಖಾಸಿಂ ಖುರಾಮ್‍ನನ್ನು ಸಿಬ್ಬಂದಿಯೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ರಾತ್ರಿ 1.40 ಸುಮಾರು ಆರೋಪಿಯನ್ನು ಬಂಧಿಸಿ, ದರೋಡೆ ಮಾಡಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು.

ಶವದ ಸಂಬಂಧಿಕರು ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *

Back to top button