ಲಂಡನ್: ಈ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯ ಮುಖ್ಯಸ್ಥ ವಿಶಾಲ್ ಗಾರ್ಗ್ ತನ್ನ 900 ಉದ್ಯೋಗಿಗಳನ್ನು ಝೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ವಜಾಗೊಳಿಸಿ ಭಾರೀ ಸುದ್ದಿಯಾಗಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ಬ್ರಿಟಿಷ್ ಮೂಲದ ಕಂಪನಿಯಲ್ಲಿ ನಡೆದಿದೆ.
ಬ್ರಿಟನ್ ಮೂಲದ ಶಿಪ್ಪಿಂಗ್ ಕಂಪನಿಯೊಂದು ತನ್ನ ಸುಮಾರು 800 ಉದ್ಯೋಗಿಗಳನ್ನು ಆನ್‌ಲೈನ್ ಝೂಮ್ ಕಾಲ್‌ನಲ್ಲಿ ವಜಾಗೊಳಿಸಿದ ಘಟನೆ ನಡೆದಿದೆ. ಬೆಟರ್ ಡಾಟ್ ಕಾಂ ಬಳಿಕ ಝೂಮ್ ಕಾಲ್ ಮುಖಾಂತರ ಉದ್ಯೋಗಿಗಳನ್ನು ವಜಾಗೊಳಿಸಿದ 2 ನೇ ಕಂಪನಿ ಎಂದೇ ಸುದ್ದಿಯಾಗುತ್ತಿದೆ. ಇದೀಗ ಝೂಮ್ ವೀಡಿಯೋ ಕಾಲ್ ಅಪ್ಲಿಕೇಶನ್ ಅನ್ನು ಕಂಪನಿಯಿದ ಉದ್ಯೋಗಿಗಳನ್ನು ವಜಾಗೊಳಿಸಲೆಂದೇ ಬಳಕೆ ಮಾಡಲಾಗುತ್ತಿದೆ ಎಂದು ಹಾಸ್ಯಾಸ್ಪದವಾಗಿ ಹೇಳಲಾಗುತ್ತಿದೆ. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ
Advertisement
Advertisement
ಬ್ರಿಟನ್ ಮೂಲದ ಪಿ ಆಂಡ್ ಒ ಹೆಸರಿನ ಶಿಪ್ಪಿಂಗ್ ಕಂಪನಿ ಮಾರ್ಚ್ 17 ರಂದು ತನ್ನ 800 ಉದ್ಯೋಗಿಗಳನ್ನು ಝೂಮ್ ಕರೆ ಮೂಲಕ ವಜಾ ಗೊಳಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಕೇವಲ 3 ನಿಮಿಷಗಳಲ್ಲಿ ಝೂಮ್ ಕರೆಯಲ್ಲಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ವಜಾಗೊಳಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಖಾಲಿ ಸ್ಟ್ರಾಲರ್ಸ್ ಸಾಲಾಗಿಟ್ಟು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್
Advertisement
ಪಿ ಆಂಡ್ ಒ ಕಂಪನಿ ಕಳೆದ 2 ವರ್ಷಗಳಿಂದ ನಷ್ಟ ಅನುಭವಿಸುತ್ತಿರುವುದರಿಂದ ತನ್ನ ಉದ್ಯೋಗಿಗಳನ್ನು ವಜಾ ಗೊಳಿಸುತ್ತಿರುದಾಗಿ ತಿಳಿಸಿದೆ. ಕೆಲವು ತಿಂಗಳ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯೂ ತನ್ನ 900 ಉದ್ಯೋಗಿಗಳನ್ನು ಝೂಮ್ ಕರೆಯ ಮೂಲಕ ವಜಾ ಗೊಳಿಸಿತ್ತು. ಬಳಿಕವೂ ನಷ್ಟದಲ್ಲಿದ್ದ ಕಂಪನಿ ಇ-ಮೇಲೆ ಮುಖಾಂತರ 4 ಸಾವಿರ ಉದ್ಯೋಗಿಳನ್ನು ವಜಾ ಗೊಳಿಸಿದೆ. ಹೀಗೆ ಕಂಪನಿ ಶೇ.50 ರಷ್ಟು ಉದ್ಯೋಗಿಗನ್ನು ವಜಾ ಗೊಳಿಸಿದೆ.