– ವೈಟ್‌ಫೀಲ್ಡ್‌ನ ಸೌಖ್ಯ ಆಸ್ಪತ್ರೆಯಲ್ಲಿ ವೆಲ್‌ನೆಸ್ ಟ್ರೀಟ್ಮೆಂಟ್
– ಇದುವರೆಗೆ 9 ಬಾರಿ ಭೇಟಿ ನೀಡಿರುವ ಚಾರ್ಲ್ಸ್
ಬೆಂಗಳೂರು: ಭಾರತೀಯ ಸಂಪ್ರದಾಯದ ಚಿಕಿತ್ಸೆ ಪಡೆದುಕೊಳ್ಳಲು ಬೆಂಗಳೂರಿಗೆ ಮೂರು ದಿನಗಳ ರಹಸ್ಯ ಭೇಟಿ ನೀಡಿದ್ದ ಬ್ರಿಟನ್ ರಾಜ ಚಾರ್ಲ್ಸ್ (King Charles) ಬುಧವಾರ ವಾಪಸ್ ಆಗಿದ್ದಾರೆ.
Advertisement
ಬ್ರಿಟನ್ ರಾಜ ಚಾರ್ಲ್ಸ್ ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ್ದರು. ವೈಟ್‌ಫೀಲ್ಡ್ಸ್ ಸೌಖ್ಯ ಆಸ್ಪತ್ರೆಯಲ್ಲಿ ವೆಲ್‌ನೆಸ್ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ. ಅವರ ಜೊತೆಯಲ್ಲಿ ರಾಣಿ ಕ್ಯಾಮಿಲ್ಲಾ ಕೂಡ ಇದ್ದರೆಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೈತರ ಆಸ್ತಿ ವಕ್ಫ್ ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ: ಹೆಚ್.ಕೆ ಪಾಟೀಲ್
Advertisement
Advertisement
ದಂಪತಿ ತಮ್ಮ ಮೂರು ದಿನಗಳ ಪ್ರವಾಸದಲ್ಲಿ ಸಮಗ್ರ ಆರೋಗ್ಯ ಕೇಂದ್ರವು ಯೋಗ, ಧ್ಯಾನ ಮತ್ತು ಚಿಕಿತ್ಸೆಗಳು ಸೇರಿದಂತೆ ಪುನರ್ಯೌವನಗೊಳಿಸುವ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಈ ಹಿಂದೆಯೂ ಒಂದೆರಡು ಸಂದರ್ಭಗಳಲ್ಲಿ ಭಾರತಕ್ಕೆ ಭೇಟಿ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಬ್ರಿಟನ್ ರಾಜ ದಂಪತಿ ಆಗ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಸೇರಿದಂತೆ ವಿವಿಧ ಕ್ಷೇಮ ಚಿಕಿತ್ಸೆಗಳನ್ನು ತೆಗೆದುಕೊಂಡಿದ್ದರು. ಯೋಗದ ಮೂಲಕ ತಮ್ಮ ದಿನಚರಿ ಆರಂಭಿಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’
ಅವರು ಇಲ್ಲಿ ನಡೆಸಿದ ವಿವಿಧ ಕ್ಷೇಮ ಚಿಕಿತ್ಸೆಯ ಭಾಗವಾಗಿ ವಿಶೇಷ ಆಹಾರಕ್ರಮ ಅನುಸರಿಸಿದ್ದರು. ಅವರು ವೆಲ್‌ನೆಸ್ ಟ್ರೀಟ್ಮೆಂಟ್‌ಗೆ ಒಳಗಾಗಿದ್ದರು. ಇದರಲ್ಲಿ ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆಗಳೂ ಸೇರಿವೆ. 30 ಎಕರೆ ಕ್ಯಾಂಪಸ್‌ನ ಸುತ್ತಲೂ ಸುದೀರ್ಘ ನಡಿಗೆ ಮಾಡಿದರು. ಸಾವಯವ ಕೃಷಿ ಚಟುವಟಿಕೆ ಕೂಡ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ವೈಟ್‌ಫೀಲ್ಡ್ ಸಮೀಪದ ಸಮೇತನಹಳ್ಳಿಯಲ್ಲಿರುವ ‘ಸೌಕ್ಯ’ ಅಂತಾರಾಷ್ಟ್ರೀಯ ಸಮಗ್ರ ಕೇಂದ್ರಕ್ಕೆ ಬ್ರಿಟನ್ ರಾಜನ ಭೇಟಿ ಇದೇ ಮೊದಲಲ್ಲ. ಅವರು 2019 ರಲ್ಲಿ ತಮ್ಮ 71 ನೇ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿಕೊಂಡಿದ್ದರು. ಕೇಂದ್ರವನ್ನು ಡಾ. ಇಸಾಕ್ ಮಥಾಯ್ ಅವರು ನಡೆಸುತ್ತಿದ್ದಾರೆ. UKಯ ರಾಜನಾಗಿ ಅವರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದ ಭಾರತದ ಕೆಲವೇ ವ್ಯಕ್ತಿಗಳಲ್ಲಿ ಇಸಾಕ್ ಕೂಡ ಒಬ್ಬರು.