ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆ (UK PM Polls) ರೇಸ್‌ನಿಂದ ಪೆನ್ನಿ ಮೊರ್ಡಂಟ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತ ಮೂಲದ ರಿಷಿ ಸುನಾಕ್ (Rishi Sunak) ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್ ಜಾನ್ಸನ್ ಭಾನುವಾರ ಘೋಷಿಸಿದ್ದರಿಂದ ರಿಷಿ ಸುನಾಕ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು. ಈಗ ಸುನಾಕ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರತಿಸ್ಪರ್ಧಿ ಮೊರ್ಡಂಟ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರಿಂದ ಒತ್ತಡ ಕೇಳಿಬಂದಿತ್ತು. ಯುಕೆಯ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಚುನಾವಣೆ; ಸುನಾಕ್ ಮುನ್ನಡೆ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೊರ್ಡಂಟ್‌ಗೆ ಒತ್ತಡ
Advertisement
Advertisement
ಮೊರ್ಡಂಟ್ ಅವರು 100 ಸಂಸದರ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸುನಾಕ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಶುಕ್ರವಾರ (ಅ.28) ರಂದು ಪ್ರಧಾನಿಯಾಗಿ ರಿಷಿ ಸುನಾಕ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗಿದೆ.
Advertisement
ರಿಷಿ ಸುನಾಕ್ ಅವರು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ (Narayana Murthy) ಹಾಗೂ ಸುಧಾಮೂರ್ತಿ (Sudha Murthy) ಅವರ ಅಳಿಯ. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳೆದಿರುವ ಅವರು ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
Advertisement
ಕೇವಲ 45 ದಿನ ಆಡಳಿತ ನಡೆಸಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ ನಂತರ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಪ್ರಧಾನಿ ಸ್ಥಾನಕ್ಕೆ ಮತ್ತೆ ರಿಷಿ ಸುನಾಕ್ ಸ್ಪರ್ಧಿಸಿದ್ದರು. ಇವರಿಗೆ ಪೆನ್ನಿ ಮೊರ್ಡಂಟ್ ಪೈಪೋಟಿ ನೀಡಿದ್ದರು. ಮೊರ್ಡಂಟ್‌ಗೆ ಕೇವಲ 28 ಸಂಸದರು ಬೆಂಬಲ ಸೂಚಿಸಿದರು. ಸುನಾಕ್ ಪರವಾಗಿ 198 ಸಂಸದರು ಬೆಂಬಲ ವ್ಯಕ್ತಪಡಿಸಿದರು. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ – ರಿಷಿ ಸುನಾಕ್ ಘೋಷಣೆ