– ಫ್ಯಾಂಟಸಿ ಪಾರ್ಕ್‌ನಲ್ಲಿ ಇರಲಿದೆ ಹತ್ತಾರು ವಿಶೇಷತೆ
ಬೆಂಗಳೂರು: ಕೆಆರ್‌ಎಸ್ ಬೃಂದಾವನ ಗಾರ್ಡನ್ ಅನ್ನು (Brindavan Gardens) ಮೇಲ್ದರ್ಜೆಗೇರಿಸುವ ಮಹತ್ವದ ನಿರ್ಧಾರಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. PPP ಮಾಡೆಲ್‌ನಲ್ಲಿ ಅಭಿವೃದ್ದಿ ಪಡಿಸಲು 2,633 ಕೋಟಿ ರೂ.ಗಳಿಗೆ ಕ್ಯಾಬಿನೆಟ್ ಅನುಮತಿ. ಟೆಂಡರ್ ಮೂಲಕ ಅನುಮೋದನೆಗೆ ಕ್ಯಾಬಿನೆಟ್ (Cabinet) ಒಪ್ಪಿಗೆ ಸೂಚಿಸಿದೆ.
ಜಲ ಸಂಪನ್ಮೂಲ ಇಲಾಖೆ (Water Resources Department) ಈ ಯೋಜನೆ ಕೈಗೆತ್ತಿಕೊಂಡಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪ್ರಸ್ತಾಪಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. 2,633 ಕೋಟಿ ರೂ. ವೆಚ್ಚದಲ್ಲಿ ಫ್ಯಾಂಟಸಿ ಪಾರ್ಕ್ ಮಾದರಿಯಲ್ಲಿ ಕೆಆರ್‌ಎಸ್ ಉದ್ಯಾನವನ್ನು ಮೇಲ್ದರ್ಜೆಗೇರಿಸುವ ಪ್ರಾಜೆಕ್ಟ್ ಇದಾಗಿದೆ.
Advertisement
Advertisement
ಫ್ಯಾಂಟಸಿ ಪಾರ್ಕ್‌ನಲ್ಲಿ ಏನೆಲ್ಲಾ ಇರಲಿದೆ?
ಕೆಆರ್‌ಎಸ್ ಸರ್ಕಲ್ ವಿಸ್ತರಣೆ, ಟೋಲ್ ಗೇಟ್, ವಾಹನಗಳ ಪಾರ್ಕಿಂಗ್, ವಿಸ್ತಾರವಾದ ಪಾದಚಾರಿ ಮಾರ್ಗ, ಬೋಟಿಂಗ್ ಲೇಕ್, ಆಂಫಿಥಿಯೇಟರ್, ಕಾವೇರಿ ಪ್ರತಿಮೆ, ಸ್ವಾಗತ ಕಮಾನುಗಳು, ಮೀನಾ ಬಜಾರ್, ಜಂಗಲ್ ಟ್ರ‍್ಯಾಕ್, ಡೋಲ್ ಮ್ಯೂಸಿಯಂ, ಪೆಂಗ್ವಿನ್ ಪಾರ್ಕ್, ಇಂಡೋರ್ ಅಮ್ಯೂಸ್ ಮೆಂಟ್ ಪಾರ್ಕ್, ಗಾಜಿನ ಮೇಲ್ಸೇತುವೆ, ವ್ಯಾಕ್ಸ್ ಮ್ಯೂಸಿಯಂ, ಅರೋಮ ಗಾರ್ಡನ್ ಮತ್ತು ಮಕ್ಕಳಿಗಾಗಿ ವಿಶೇಷ ಪಾರ್ಕ್, ಪ್ಯಾರಾ ಸೇಲಿಂಗ್, ವಾಟರ್ ಪ್ಲೇನ್, ಬಟಾನಿಕಲ್ ಗಾರ್ಡನ್, ಲೇಸರ್ ಶೋ ಪ್ರಾಜೆಕ್ಟ್ ವಾಲ್, ಹೆಲಿಪ್ಯಾಡ್, ಜೈಹೋ ಫೌಂಟನ್ ಇರಲಿದೆ.
Advertisement
Advertisement
ಇದಲ್ಲದೇ ಹಲವು ಮಹತ್ವದ ವಿಚಾರಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. KIADBಯ ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2.64 ಎಕರೆ ಸಿಎ ನಿವೇಶನವನ್ನು ಲೋಕ ಶಿಕ್ಷಣ ಟ್ರಸ್ಟ್‌ಗೆ ಹಂಚಿಕೆ ಮಾಡಲು ಮೊತ್ತಕ್ಕೆ ರಿಯಾಯತಿ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಜೊತೆಗೆ ಕರ್ನಾಟಕ ವೃತ್ತಿ ಕೌಶಲ್ಯಾಭಿವೃದ್ದಿ ನಿಗಮ ಸ್ಥಾಪನೆಗೂ ಸಂಪುಟ ಒಪ್ಪಿಗೆ ಸೂಚಿಸಿದೆ.
ಅನಿಮೇಶನ್ ವಿಶ್ಯುವಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್ (AVGC) 2.0. – ʻಉತ್ಕೃಷ್ಟತಾ ಕೇಂದ್ರವನ್ನುʼ ರೂ. 16.00 ಕೋಟಿಗಳ ಅಂದಾಜು ಮೊತ್ತದಲ್ಲಿ (CAPEX-ರೂ. 7.00 ಕೋಟಿಗಳು ಮತ್ತು” OPEX-ರೂ. 9.00 ಕೋಟಿಗಳು) ಅನುಮೋದನೆಗೆ ಕ್ಯಾಬಿನೆಟ್ ಒಪ್ಪಿಗೆ. ಲೋಕೋಪಯೋಗಿ ಇಲಾಖೆಯಿಂದ ರಾಜ್ಯದ 15 ತಾಲ್ಲೂಕುಗಳಲ್ಲಿ ತಲಾ 1 ಹಾಸ್ಟೆಲ್‌ಗಳ ಕಟ್ಟಡಗಳನ್ನು ಒಟ್ಟು 105.00 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ (ಪ್ರತಿ ಹಾಸ್ಟೆಲ್ – ರೂ. 7 ಕೋಟಿಗಳು) ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿತು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ನೇಮಕಾತಿಗೆ ಸಂಬಂಧಿಸಿದಂತೆ ʻಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ʼಕ್ಕೆ ಅನುಮೋದನೆಗೆ ಕ್ಯಾಬಿನೆಟ್ ಒಪ್ಪಿಗೆ. ಪ್ರೌಢಶಾಲಾ ಶಿಕ್ಷಕರಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆಯಲು 55% ನಿಂದ 50% ಅಂಕಕ್ಕೆ ಇಳಿಸಿ ಪರಿಷ್ಕರಣೆಗೆ ಕ್ಯಾಬಿನೆಟ್ ಒಪ್ಪಿಗೆ. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷಾ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಈ ಬಾರಿ ವಿಶೇಷ ಅವಕಾಶ ಕೊಡಲು ಕ್ಯಾಬಿನೆಟ್ ಒಪ್ಪಿಗೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಹಾಕಲು ವಿಶೇಷ ಅವಕಾಶಕ್ಕೆ ಕ್ಯಾಬಿನೆಟ್ ಅನುಮೋದನೆ. ಎರಡು ವರ್ಷ ವಯಸ್ಸು ಸಡಿಲಿಕೆಗೆ ಕ್ಯಾಬಿನೆಟ್ ಒಪ್ಪಿಗೆ.