ಬೀದರ್: ನಗರದ ಬ್ರಿಮ್ಸ್ ಆಸ್ಪತ್ರೆ ಲಿಫ್ಟ್ ದಿಢೀರ್ ಸ್ಥಗಿತಗೊಂಡ ಪರಿಣಾಮ ಇಬ್ಬರು ಮಕ್ಕಳು, ಓರ್ವ ಗರ್ಭಿಣಿ ಸೇರಿದಂತೆ ಸುಮಾರು 10 ಜನರು ಪರದಾಡಿದ್ದಾರೆ.
ಆಗಿದ್ದೇನು?:
ಲಿಫ್ಟ್ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಹತ್ತಿದ್ದರು. ಇದರಿಂದಾಗಿ ನಾಲ್ಕನೇ ಮಹಡಿಯಲ್ಲಿ ಲಿಫ್ಟ್ ದಿಢೀರ್ ಆಗಿ ಸ್ಥಗಿತಗೊಂಡಿದೆ. ಬಾಗಿಲು ತೆರಯದಿದ್ದಾಗ ಮಕ್ಕಳು, ಗರ್ಭಿಣಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಕಿರುಚಿದ್ದಾರೆ. ಇದನ್ನು ಕೇಳಿಸಿಕೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ಯಾವುದೇ ಪ್ರಯತ್ನ ಕೈಗೊಂಡರೂ ಲಿಫ್ಟ್ ತೆರೆಯಲಿಲ್ಲ. ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸುಮಾರು ಒಂದು ಗಂಟೆ ಕಾಲ ಲಿಫ್ಟ್ ನಲ್ಲಿ ಸಿಲುಕಿದ್ದ ರೋಗಿಗಳು ಹಾಗೂ ಸಿಬ್ಬಂದಿ ಒಬ್ಬರಂತೆ ಹೊರಬಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv