ಬೆಂಗಳೂರು: ಶಾಸಕರಿಗೆ ನೀಡಲು ತರಿಸಿದ್ದ ದುಬಾರಿ ಬೆಲೆಯ ಬ್ರೀಫ್ ಕೇಸ್ ಗಳನ್ನು ನೀಡದಂತೆ ಸ್ಪೀಕರ್ ರಮೇಶ್ ಕುಮಾರ್ ರವರು ವಿಧಾನಸಭಾ ಸಚಿವಾಲಯಕ್ಕೆ ಆದೇಶ ನೀಡಿದ್ದಾರೆ.
ವಿಧಾನಸಭೆಯ ನೂತನ ಶಾಸಕರಿಗೆ ನೀಡಲು ವಿಧಾನಸಭಾ ಸಚಿವಾಲಯ 224 ಕ್ಕೂ ಹೆಚ್ಚು ಬ್ರೀಫ್ ಕೇಸ್‍ಗಳನ್ನು ಖರೀದಿಸಿತ್ತು. ಇದಕ್ಕೇ ಸ್ಪೀಕರ್ ರವರ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ರವರು ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ನನಗೆ ಮಾಹಿತಿ ನೀಡದೇ, ಲಕ್ಷಾಂತರ ರೂ. ಮೌಲ್ಯವುಳ್ಳ ಬ್ರೀಫ್ ಕೇಸ್ ಗಳನ್ನು ಖರೀದಿಸಿದ್ದು ಏಕೆ ಎಂದು ಸಚಿವಾಲಯದ ವಿರುದ್ಧ ಗುಡುಗಿದ್ದಾರೆ. ಯಾವುದೇ ಬ್ರೀಫ್ ಕೇಸ್ ಗಳನ್ನು ನೂತನ ಶಾಸಕರಿಗೆ ನೀಡದಂತೆ ವಿಧಾನಸಭಾ ಸಚಿವಾಲಯಕ್ಕೆ ಸ್ಪೀಕರ್ ಆದೇಶ ನೀಡಿದ್ದಾರೆ.
Advertisement
15ನೇ ವಿಧಾನಸಭೆಗೆ ಆಯ್ಕೆಯಾಗಿದ್ದ ನೂತನ ಸದಸ್ಯರಿಗೆ ನೀಡಲು ವಿಧಾನಸಭಾ ಸಚಿವಾಲಯ ಬ್ರೀಫ್ ಕೇಸ್‍ಗಳನ್ನು ಖರೀದಿಸಿತ್ತು. ಅಧಿಕೃತವಾಗಿ ಖರೀದಿ ಮಾಡಿದ್ದರೆ, ನೂತನ ಶಾಸಕರಿಗೆ ಪ್ರಮಾಣ ವಚನ ಬೋಧನೆ ಬಳಿಕ ಬ್ರೀಫ್ ಕೇಸ್ ನೀಡಬೇಕಾಗಿತ್ತು. ಆದರೆ ಅಧಿವೇಶನ ಮುಗಿದ ನಂತರವು ನೂತನ ಶಾಸಕರಿಗೆ ಬ್ರೀಫ್ ಕೇಸ್ ನ್ನು ನೀಡಿಲ್ಲ.
Advertisement
ಈ ಬ್ರೀಫ್ ಕೇಸ್‍ಗಾಗಿಯೇ ಸಚಿವಾಲಯ ಅಮೇರಿಕನ್ ಟೂರಿಸ್ಟರ್ ಕಂಪೆನಿಯ 224 ಕ್ಕೂ ಹೆಚ್ಚಿನ ಬ್ರೀಫ್ ಕೇಸ್ ಗಳನ್ನು ಖರೀದಿಸಿತ್ತು. ಒಂದೊಂದರ ಬೆಲೆ ಅಂದಾಜು 5 ಸಾವಿರ ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.