ಕಿನ್ಶಾಸಾ: ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಲಾಗುವ ಕಾಮಗಾರಿಗಳು ಕೆಲವೊಮ್ಮೆ ಕೆಲವೇ ದಿನಗಳಲ್ಲಿ ಕಳಪೆಯೆಂದು ಗೊತ್ತಾಗುತ್ತದೆ. ಆಗಾಗ ಜನರು ಅದರ ಸಿಟ್ಟನ್ನು ಸರ್ಕಾರದ ಮೇಲೆ ತೆಗೆಯುವುದುಂಟು. ಇಲ್ಲೊಂದು ಸೇತುವೆ ಉದ್ಘಾಟನೆಯ ಸಮಯವೇ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಇದರ ವೀಡಿಯೋಗಳು ವೈರಲ್ ಆಗಿರುವುದು ಮಾತ್ರವಲ್ಲದೇ ಸೇತುವೆ ನಿರ್ಮಾಣದ ಗುಣಮಟ್ಟದ ಬಗ್ಗೆ ಜನರು ಅಪಹಾಸ್ಯ ಮಾಡುತ್ತಿದ್ದಾರೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ(ಡಿಆರ್‌ಸಿ) ಸೇತುವೆಯೊಂದನ್ನು ಉದ್ಘಾಟಿಸಲು ಅಧಿಕಾರಿಗಳು ತಯಾರಾಗಿದ್ದು, ಉದ್ಘಾಟನೆಗೆ ರಿಬ್ಬನ್ ಕತ್ತರಿಸುವ ವೇಳೆಗೆ ಸರಿಯಾಗಿ ಸೇತುವೆ ಕುಸಿದಿದೆ. ಈ ಕಿರು ಸೇತುವೆಯನ್ನು ಮಳೆಗಾಲದಲ್ಲಿ ಸ್ಥಳೀಯರಿಗೆ ನದಿ ದಾಟಲು ನಿರ್ಮಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
Advertisement
Advertisement
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸೇತುವೆಯನ್ನು ಉದ್ಘಾಟಿಸಲು ಅಧಿಕಾರಿಗಳು ಸೇತುವೆ ಮೇಲೆ ನಿಂತಿರುವುದು ಕಾಣಿಸುತ್ತದೆ. ಸೇತುವೆಯ ಒಂದು ಬದಿಯಲ್ಲಿ ಕೆಂಪು ರಿಬ್ಬನ್ ಅನ್ನು ಕಟ್ಟಲಾಗಿದ್ದು, ಅದನ್ನು ಮಹಿಳಾ ಅಧಿಕಾರಿಯೊಬ್ಬರು ಕತ್ತರಿಸಿದ್ದಾರೆ. ಆದರೆ ರಿಬ್ಬನ್‌ಗೆ ಕತ್ತರಿ ತಾಗುತ್ತಲೇ ಸೇತುವೆ ಕುಸಿಯಲಾರಂಭಿಸಿದೆ. ಇದನ್ನೂ ಓದಿ: ಮಂಗೋಲಿಯಾ ಅಧ್ಯಕ್ಷನಿಂದ ರಾಜನಾಥ್ ಸಿಂಗ್‍ಗೆ ವಿಭಿನ್ನ ಉಡುಗೊರೆ
Advertisement
VIDEO: Bridge collapses during commissioning in Congo DRC
SOURCE: Africa Facts/Twitter pic.twitter.com/AIPTw9k8ji
— The Nation Nigeria (@TheNationNews) September 6, 2022
Advertisement
ಸೇತುವೆ ಕುಸಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳನ್ನು ಸೇತುವೆಯಿಂದ ಎಳೆದು ರಕ್ಷಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ. ಆದರೆ ಉದ್ಘಾಟನೆಯಾಗಿ ಒಂದು ಕ್ಷಣವೂ ನಿಲ್ಲದ ಸೇತುವೆ ಕುಸಿದು 2 ಭಾಗವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು