ಪಾಟ್ನಾ: ಒಂದು ದಿನದ ಮಳೆಗೆ ಇಡೀ ಬೆಂಗಳೂರು ತೋಯ್ದು ತೊಪ್ಪೆಯಾಗಿರೋದನ್ನು ನೋಡಿದ್ದೀರಿ. ಆದ್ರೆ ನೆರೆ ರಾಜ್ಯಗಳಲ್ಲಂತೂ ಮಳೆರಾಯನ ಅಬ್ಬರ ಇನ್ನೂ ಭಯಾನಕವಾಗಿದೆ. ನೇಪಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿಹಾರದ 14 ಜಿಲ್ಲೆಗಳು ಪ್ರವಾಹದಲ್ಲಿ ಬಹುತೇಕ ಮುಳುಗಿಹೋಗಿವೆ.
ಅರೇರಿಯಾ ಜಿಲ್ಲೆಯೊಂದರಲ್ಲೇ 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದೇ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದು ಬೀಳುವ ಸ್ಥಿತಿಯಲ್ಲಿದ್ರೂ ದಾಟಲು ಯತ್ನಿಸಿದ ತಂದೆ-ತಾಯಿ ಮತ್ತು ಮಗು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ತಂದೆ ಪಾರಾಗಿದ್ದು ತಾಯಿ ಮಗು ನೂರಾರು ಜನರ ಕಣ್ಣೆದುರೇ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ಜನರ ಅಸಹಾಯಕತೆಯನ್ನ ತೋರಿಸ್ತಿದೆ.
ಇದುವರೆಗೂ ಬಿಹಾರದಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 98ಕ್ಕೆ ಏರಿದ್ದು, 73 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಸಹರ್ಸಾ ಜಿಲ್ಲೆಯಂತೂ ಸಂಪೂರ್ಣ ಮುಳುಗಿಹೋಗಿದೆ.
https://www.youtube.com/watch?v=cXuvxBoGMVI