ಅಂಬಾಲಾ: ಮದುವೆಯ ಸಂದರ್ಭದಲ್ಲಿ ಡ್ಯಾನ್ಸ್ ಬೇಡ ಎಂದಿದಕ್ಕೆ ವರನ ಕಡೆಯವರು ವಧುವಿನ ಸಂಬಂಧಿಕನ ಮೇಲೆ ಚಾಕು ಇರಿದ ಘಟನೆ ಶುಕ್ರವಾರ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.
ವಿಕಾಸ್ ಕೊಲೆಯಾದ ವ್ಯಕ್ತಿ. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವರನನ್ನು ಮದುವೆಗೆ ಕರೆದುಕೊಂಡು ಬರುವಾಗ ರಸ್ತೆ ಉದ್ದಕ್ಕೂ ನೃತ್ಯ ಮಾಡುವ ಸಂಪ್ರದಾಯವಿದೆ. ಹೀಗೆ ಗುರುವಾರ ರಾತ್ರಿ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಡ್ಯಾನ್ಸ್ ಮಾಡುತ್ತಲೇ ಇದ್ದರು.
Advertisement
Advertisement
ಈ ವೇಳೆ ಮದುವೆಗೆ ತಡವಾಗುತ್ತಿದೆ. ಹೀಗಾಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದು ವಧುವಿನ ಕಡೆಯವರಾದ ವಿಕಾಸ್ ವರನ ಸಂಬಂಧಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿಕಾಸ್ ಮನವಿಗೆ ಸ್ಪಂದಿಸದೇ ವರನ ಕಡೆಯವರು ಡ್ಯಾನ್ಸ್ ಮಾಡುತ್ತಿದ್ದರು.
Advertisement
ವಿಕಾಸ್ ಡ್ಯಾನ್ಸ್ ಬೇಡವೆಂದು ಹೇಳಿದಕ್ಕೆ ವರ ಹಾಗೂ ವಧುವಿನ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಕ ಸಂಜಯ್, ವಿಕಾಸ್‍ಗೆ ಚಾಕುಯಿಂದ ಇರಿದಿದ್ದಾನೆ. ಪರಿಣಾಮ ವಿಕಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement
ಆರೋಪಿ ಸಂಜಯ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv