ನವದೆಹಲಿ: ಮದುವೆ ಮಂಟಪಕ್ಕೆ ಅಣ್ಣಂದಿರ ಕೈ ಮೇಲೆ ಪಾದವಿಟ್ಟು ವಧು ನಡೆದುಕೊಂಡು ಬರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹೃದಯಸ್ಪರ್ಶಿ ವೀಡಿಯೋ ನೋಡಿ ನೆಟ್ಟಿಗರು ಸಂತೋಷಗೊಂಡಿದ್ದಾರೆ.
ಮದುವೆ ಎಂದರೆ ಎಲ್ಲ ವಧು-ವರರಿಗೂ ಸಂಭ್ರಮದ ದಿನ. ಈ ದಿನ ತುಂಬಾ ವಿಶೇಷವಾಗಿರಬೇಕು ಎಂದು ಅವರ ಮನೆಯರು ಕಷ್ಟ ಪಡುತ್ತಿರುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಪ್ರೀತಿಯಿಂದ ಭಿನ್ನವಾಗಿ ಸ್ವಾಗತಿಸುತ್ತಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
ಈ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನ ‘ವಿಟ್ಟಿ_ವೆಡ್ಡಿಂಗ್’ ನಲ್ಲಿ, ಚಿಕ್ಕ ಹುಡುಗಿ ನಮ್ಮ ತಂಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ವಧು ತನ್ನ ಅಣ್ಣಂದಿರ ಕೈ ಮೇಲೆ ಪಾದವನ್ನು ಇಟ್ಟುಕೊಂಡು ಮದುವೆ ಮಂಟಪಕ್ಕೆ ನಡೆದುಕೊಂಡು ಬರುವುದು ಸಖತ್ ವೈರಲ್ ಆಗಿದೆ. ವಧು ಕೆಂಪು ಲೆಹೆಂಗಾ ಧರಿಸಿದ್ದು, ವಧು ಅಣ್ಣಂದಿರ ಕೈ ಮೇಲೆ ನಡೆದುಕೊಂಡು ಬರುವಾಗ ‘ಮೇರಾ ಭಾಯ್ ತು’ ಸಾಂಗ್ ಪ್ಲೇ ಆಗುತ್ತದೆ.
View this post on Instagram
ವಧು ಹೂವಿನಿಂದ ಮಾಡಿದ ದಾರಿಯಲ್ಲಿ ಬರುತ್ತಿದ್ದು, ವಧುವಿನ ಸಹೋದರರು ದಾರಿಯುದ್ದಕ್ಕೂ ಮೊಣಕಾಲುಗಳ ಮೇಲೆ ಕುಳಿತಿರುವುದನ್ನು ಕಾಣಬಹುದು. ಜನರು ವಧುವಿನ ಮೇಲೆ ಹೂವು ಹಾಕುತ್ತಿದ್ದು, ಅವರ ಸಹೋದರರು ತಮ್ಮ ಚಿಕ್ಕ ಸಹೋದರಿ ನಡೆಯುವ ದಾರಿಯಲ್ಲಿ ತಮ್ಮ ಅಂಗೈಯನ್ನು ಇಟ್ಟಿರುತ್ತಾರೆ. ಆಗ ಆಕೆ ಅವರ ಕೈ ಮೇಲೆ ನಡೆದುಕೊಂಡು ಬಂದಿದ್ದು, ನೆಟ್ಟಿಗರು ಈ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್
ನೆಟ್ಟಿಗರು ಇಂತಹ ಒಡಹುಟ್ಟಿದವರನ್ನು ಪಡೆಯಲು ನೀನು ತುಂಬಾ ಅದೃಷ್ಟಶಾಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.