– ಚಿನ್ನ ಹಾಕದ್ದರ ಕಾರಣ ತಿಳಿಸಿದ ಮದುಮಗಳು
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ವಧುವೊಬ್ಬಳು ಚಿನ್ನದ ಬದಲು ಟೊಮೆಟೋ ಹಾರ ಧರಿಸಿದ್ದು, ಇದೀಗ ಟ್ರೋಲಾಗುತ್ತಿದ್ದಾಳೆ.
ಪಾಕಿಸ್ತಾನದ ಪತ್ರಕರ್ತರೊಬ್ಬರು ಮದುಮಗಳನ್ನು ಸಂದರ್ಶನ ಮಾಡಿರುವ ವಿಡಿಯೋವನ್ನು ನೈಲಾ ಇನಾಯತ್ ಎಂಬ ಟ್ವಿಟ್ಟರ್ ಬಳಕೆದಾರೆ ಶೇರ್ ಮಾಡಿಕೊಂಡಿದ್ದಾಳೆ. ಚಿನ್ನದ ಬದಲು ಟೊಮೆಟೋ ಧರಿಸಿದ್ದರ ಕಾರಣವನ್ನು ತಮ್ಮ ಚಾನೆಲ್ ನಲ್ಲಿ ವಿವರಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ..?
ಗೋಲ್ಡನ್ ಕಲರ್ ಡ್ರೆಸ್ ಧರಿಸಿರುವ ವಧು, ಟೊಮೆಟೋದಲ್ಲಿ ಮಾಡಿರುವ ಕಿವಿಯೋಲೆ, ನೆಕ್ಲೆಸ್, ಬೈತಲೆ ಬೊಟ್ಟು ಹಾಗೂ ಕೈ ಖಡಗವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಅಲ್ಲದೆ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತನಗೆ ಪೈನ್ ಬೀಜಗಳನ್ನೇ ಉಡುಗೊರೆಯಾಗಿ ನೀಡುವಂತೆ ಕೇಳಿಕೊಂಡಿದ್ದಾಳೆ. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, ಚಿನ್ನದ ದರದಲ್ಲಿ ಭಾರೀ ಏರಿಕೆಯಾಗಿದೆ. ಇತ್ತ ಟೊಮೆಟೋ ಹಾಗೂ ಪೈನ್ ಬೀಜಗಳ ದರವೂ ದುಬಾರಿಯಾಗಿದೆ. ಹೀಗಾಗಿ ನಾನು ಟೊಮೆಟೋವನ್ನು ನನ್ನ ಮದುವೆಯಲ್ಲಿ ಬಳಕೆ ಮಾಡಿಕೊಂಡೆ ಎಂದು ವಿವರಿಸಿದ್ದಾಳೆ.
ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇನಾಯತ್ ಅಪ್ಲೋಡ್ ಮಾಡಿದ ಬಳಿಕ 32 ಸಾವಿರ ವ್ಯೂವ್ಸ್ ಬಂದಿದ್ದು, 3 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ ಹಲವರು ಕಾಮಿಡಿಯಾಗಿ ಕಾಮೆಂಟ್ ಮಾಡಿದ್ದಾರೆ.
ಸೋಮವಾರ ಟೊಮೆಟೋ ಕೆ.ಜಿಗೆ 300/ 320 ಇದ್ದ ಬೆಲೆ ಮಂಗಳವಾರ ಕರಾಚಿ ಮಾರುಕಟ್ಟೆಯಲ್ಲಿ 400ಕ್ಕೆ ಏರಿಕೆಯಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಪಾಕಿಸ್ತಾನ ಭಾರತದೊಂದಿಗಿನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಅಲ್ಲಿನ ಜನ ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.
Tomato jewellery. In case you thought you've seen everything in life.. pic.twitter.com/O9t6dds8ZO
— Naila Inayat (@nailainayat) November 18, 2019