ಸ್ಯಾಂಡಲ್‌ವುಡ್ ನಟಿ ಸೋನಲ್ (Sonal) ಇತ್ತೀಚೆಗೆ ನನ್ನ ಬದುಕಿನ ಡೈರೆಕ್ಟರ್ ಸಿಕ್ಕಾಯ್ತು ಎಂದು ಅಧಿಕೃತವಾಗಿ ಮದುವೆ ಬಗ್ಗೆ ಅನೌನ್ಸ್ ಮಾಡಿದ್ದರು. ನಿರ್ದೇಶಕ ತರುಣ್ ಸುಧೀರ್ (Tharun Sudhir) ಜೊತೆ ಹಸೆಮಣೆ ಏರೋದಕ್ಕೆ ಸಜ್ಜಾಗಿರುವ ನಟಿ ಈಗ ಮದುವೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮದುವೆಗೆ ಜವಳಿ ಖರೀದಿ ಮಾಡೋದ್ರಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಬಟ್ಟೆ ಶಾಪ್‌ವೊಂದರಲ್ಲಿ ಅಮ್ಮನ ಜೊತೆ ಸೋನಲ್ ಸೀರೆ ಖರೀದಿ ಮಾಡುತ್ತಿರುವ ಫೋಟೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ದರ್ಶನ್ ಪ್ರಕರಣ ಕೋರ್ಟ್‌ನಲ್ಲಿದೆ, ತೀರ್ಪು ಬರಲಿ ಮಾತನಾಡೋಣ: ವಿಕ್ರಮ್ ರವಿಚಂದ್ರನ್
ವಿಶೇಷ ಫೋಟೋಶೂಟ್ ಹಂಚಿಕೊಂಡು ಮದುವೆ ಬಗ್ಗೆ ಈ ಜೋಡಿ ಸಿಹಿಸುದ್ದಿ ಕೊಟ್ಟಿದ್ದರು. ಇತ್ತೀಚೆಗೆ ನವರಂಗ್ ಥಿಯೇಟರ್‌ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು, ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಲ್ ವಿಡಿಯೋ ಮೂಡಿ ಬಂದಿದೆ. ಸಿನಿಮಾಟೋಗ್ರಾಫರ್ ಎ.ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಪ್ರಿ ವೆಡ್ಡಿಂಗ್ ಅಂದರೆ ಜನರು ಸಿನಿಮಾ ಶೈಲಿಯಲ್ಲಿ ಇರಬೇಕು ಅಂತ ಸಿನಿಮ್ಯಾಟಿಕ್ ಆಗಿ ಶೂಟ್ ಮಾಡ್ತಾರೆ. ಆದರೆ ತರುಣ್ ಮತ್ತು ಸೋನಲ್ ಇಬ್ಬರೂ ಸಿನಿಮಾದವರೇ ಆಗಿರೋದ್ರಿಂದ ಬೇರೆಯದ್ದೇ ಸ್ಟೈಲಿನಲ್ಲಿ ಇರಲಿ ಅಂತ ಥಿಯೇಟರ್‌ನಲ್ಲಿ ಶೂಟ್ ಮಾಡಿದ್ದಾರೆ. ಅದಷ್ಟೇ ಅಲ್ಲದೆ, ಸಿನಿಮಾ ಅಂದರೆ ಸಿಂಗಲ್ ಸ್ಕ್ರಿನ್‌ನಲ್ಲಿ ಥಿಯೇಟರ್ ಅದರಲ್ಲೂ ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್‌ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವರು. ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್‌ನಲ್ಲಿ ಶತದಿನೋತ್ಸವ ಪೂರೈಸಿವೆ. ಹಾಗಾಗಿ ನವರಂಗ್ ಥಿಯೇಟರ್‌ನಲ್ಲೇ ತಮ್ಮ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ.
ಇದೇ ಆಗಸ್ಟ್ 10, 11ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಆಗಸ್ಟ್ 10ರಂದು ಸಂಜೆ 6:30 ನಂತರ ಆರತಕ್ಷತೆ ಕಾರ್ಯಕ್ರಮ, ಆ.11ರಂದು ಬೆಳಗ್ಗೆ 10:50 ರಿಂದ 11:35ರ ಶುಭ ಮುಹೂರ್ತದಲ್ಲಿ ತರುಣ್ ಮತ್ತು ಸೋನಲ್ ಮದುವೆ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಮದುವೆ ಜರುಗಲಿದೆ.