ಬೀಜಿಂಗ್: ಮದುವೆ ಫೋಟೋ ತುಂಬಾ ಚೆನ್ನಾಗಿ ಇರಬೇಕು ಅಂತ ಎಲ್ಲಾ ಜೋಡಿಗಳೂ ಆಸೆ ಪಡ್ತಾರೆ. ಹಾಗೇ ಇತ್ತೀಚೆಗೆ ವೆಡ್ಡಿಂಗ್ ಫೋಟೋಗ್ರಫಿ ಕೂಡ ತುಂಬಾ ಕಾಮನ್ ಆಗಿದೆ. ಕಣ್ಮನ ಸೆಳೆಯೋ ಸ್ಥಳಗಳಲ್ಲಿ ವಧು ವರ ಫೋಟೋ ತೆಗೆದಿಕೊಳ್ಳಬಯಸುತ್ತಾರೆ. ಆದ್ರೆ ಇಲ್ಲೊಂದು ಜೋಡಿಗೆ ರೊಮ್ಯಾಂಟಿಕ್ ಫೋಟೋಶೂಟ್ ದುಸ್ವಪ್ನದಂತಾಗಿತ್ತು. ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೀನಾದಲ್ಲಿ ಹೊಸದಾಗಿ ಮದುವೆಯಾಗಿದ್ದ ವಧು ವರರಿಬ್ಬರೂ ಸಮುದ್ರ ಕಿನಾರೆಯಲ್ಲಿ ಫೋಟೋ ಶೂಟ್ ಮಡಿಸುತ್ತಿದ್ರು. ಸಮುದ್ರದ ಬಂಡೆಗಳ ಮೇಲೆ ನಿಂತು ವಿವಿಧ ಭಂಗಿಯಲ್ಲಿ ಪೋಸ್ ಕೊಡ್ತಿದ್ರು. ಈ ವೇಳೆ ಅವರು ಮುಂದೇನಾಗುತ್ತೆ ಅಂತ ನಿರೀಕ್ಷಿಸಿರಲಿಲ್ಲ. ಬಂಡೆ ಮೇಲೆ ನಿಂತ ಇಬ್ಬರೂ ಚುಂಬಿಸುತ್ತಾ ಪೋಸ್ ಕೊಡುತ್ತಿದ್ದಂತೆ ಅಲೆ ಬಂದು ಬಡಿದು ವಧು ಜಾರಿಬಿದ್ದಿದ್ದಾಳೆ. ಅಲೆಗಳ ರಭಸಕ್ಕೆ ಒಂದಿಷ್ಟು ದೂರ ಕೊಚ್ಚಿಹೋಗಿದ್ದಾಳೆ.
ಆಕೆ ಬಿದ್ದ ಪರಿಣಾಮ ವರ ಕೂಡ ಕೆಳಗೆ ಬಿದ್ದಿದ್ದು, ಹೆಂಡ್ತಿಯನ್ನ ಹಿಡಿದುಕೊಂಡಿದ್ದಾನೆ. ಹೀಗಾಗಿ ಅದೃಷ್ಟವಶಾತ್ ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಈ ವಿಡಿಯೋಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ವಧು-ವರನ ಸ್ಥಿತಿ ನೋಡಿ ಅಯ್ಯೋ ಪಾಪ ಅಂದಿದ್ರೆ ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ.
How to really sweep her off her feet. pic.twitter.com/odHuKUf4wt
— Shanghaiist (@shanghaiist) November 2, 2017