ತಿರುವನಂತಪುರಂ: ಕೇರಳದಲ್ಲಿ ವಧು ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ವರನಿಗೆ ಹಾಗೂ ಅತಿಥಿಗಳಿಗೆ ಸರ್ಪ್ರೈಸ್ ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಧು ಅಂಜಲಿ ತನ್ನ ಮದುವೆಯಲ್ಲಿ ಕೆಂಪು ಬಣ್ಣದ ಸೀರೆ ಧರಿಸಿ ಮಲೆಯಾಳಂ ಹಾಡಿಗೆ ಹೆಚ್ಚೆ ಹಾಕಿದ್ದಾರೆ. ಈ ವೇಳೆ ವರ ವರುಣ್ ಹಾಗೂ ಅಲ್ಲಿದ್ದ ಸಂಬಂಧಿಕರು ವಧುವಿನ ಡ್ಯಾನ್ಸ್ ಎಂಜಾಯ್ ಮಾಡಿದ್ದಾರೆ. ವಧು ಡ್ಯಾನ್ಸ್ ಮಾಡುತ್ತಾ ವೇದಿಕೆ ಮೇಲೆ ಹೋಗಿದ್ದಾರೆ. ವರ ವರುಣ್ಗೆ ಸರ್ಪ್ರೈಸ್ ನೀಡುವ ಸಲುವಾಗಿ ವಧು ಡ್ಯಾನ್ಸ್ ಮಾಡಲು ನಿರ್ಧರಿಸಿದ್ದರು.
Advertisement
Be prepared folks. This is Year 2020. Brides will no more be shy or coy on their big days. See how a bride makes her entrance for her wedding in Cannor, Kerala.???????????????????? pic.twitter.com/y9ZZjnYEpu
— Karan Kapoor (@karannkapoor18) January 28, 2020
Advertisement
ಕೇರಳದ ಕಣ್ಣೂರಿನ ಸಿಆರ್ ಆಡಿಟೋರಿಯಂನಲ್ಲಿ ಅಂಜಲಿ ಡ್ಯಾನ್ಸ್ ವಿಡಿಯೋವನ್ನು ಸೆರೆ ಹಿಡಿಯಲಾಗಿತ್ತು. ಮೊದಲು ಈ ವಿಡಿಯೋ ಫೇಸ್ಬುಕ್ನಲ್ಲಿ ಶೇರ್ ಆಗಿದ್ದು, 76 ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಬಂದಿತ್ತು. ಬಳಿಕ ಈ ವಿಡಿಯೋ ಟ್ವಿಟ್ಟರ್ ಹಾಗೂ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ.
Advertisement
ಟ್ವಿಟ್ಟರಿನಲ್ಲಿ ಈ ವಿಡಿಯೋಗೆ 50 ಸಾವಿರ ವ್ಯೂವ್ಸ್ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಈ ವಿಡಿಯೋ ನೋಡಿ ನನಗೆ ತುಂಬಾ ಇಷ್ಟವಾಯಿತು ಎಂದು ರೀ-ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು, ಮದುವೆಯಲ್ಲಿ ಇದು ಬೇಕಾಗಿರಲಿಲ್ಲ ಎಂದು ರೀ-ಟ್ವೀಟ್ ಮಾಡಿದ್ದಾರೆ.
Advertisement
Too old school to like this
— Ravi Sharma (@RaviSharma210) February 4, 2020