ಚಂಡೀಗಢ: ವರ ಬರೋದಕ್ಕೂ ಮೊದಲೇ ಮೆರವಣಿಗೆಗೆ ಸಿದ್ಧಪಡಿಸಿದ್ದ ಕುದುರೆ ಹತ್ತಿ ಊರೆಲ್ಲ ಒಂದು ಸುತ್ತು ಹಾಕಿದ್ದಾರೆ. ಉತ್ತರ ಭಾರತದ ಮದುವೆಗಳಲ್ಲಿ ವರನನ್ನು ಸಿಂಗರಿಸಿದ್ದ ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಮೂಲಕ ಕಲ್ಯಾಣ ಮಂಟಪಕ್ಕೆ ಕರೆತರಲಾಗುತ್ತದೆ.
ಪಂಜಾಬ್ ನ ಹೋಶಿಯಾರಪುರದ ಶಾಂತಿನಗರದಲ್ಲಿ ಶುಕ್ರವಾರ ಮದುವೆ ನಿಗದಿಯಾಗಿತ್ತು. ಒಂದು ದಿನ ಮೊದಲೇ ವಧು ಆರತಿ ಶರ್ಮಾ ಕುದುರೆ ಏರಿ ಊರೆಲ್ಲ ಸುತ್ತಿದ್ದಾರೆ. ವಧುವಿನ ಕುದುರೆ ಸವಾರಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ವಧು – ವಿಡಿಯೋ ವೈರಲ್
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ವಧುವಿನ ತಂದೆ, ನನಗೆ ಒಬ್ಬ ಮಗ ಮತ್ತು ಒಬ್ಬಳೇ ಮಗಳು. ಪುತ್ರಿ ಆರತಿ ವಿವಾಹ ಅಮೆರಿಕಾದಲ್ಲಿರುವ ಅನ್ಮೋಲ್ ವಿಜಯ್ ಪಾಟೀಲ್ ಜೊತೆ ಫೆಬ್ರವರಿ 1ರಂದು ನಿಶ್ಚಯವಾಗಿತ್ತು. ಮಗಳು ಕುದುರೆ ಸವಾರಿ ಮಾಡುಲು ಇಷ್ಟಪಟ್ಟಿದ್ದರಿಂದ ಅವಕಾಶ ನೀಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುದುರೆ ಏರಿ ಪತಿ ಮನೆಗೆ ಹೋದ ಸಹೋದರಿಯರು
Advertisement
ಇಂದು ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ. ಮದುವೆಯಲ್ಲಿ ವರ ಕುದುರೆ ಮೇಲೆ ಬಂದ್ರೆ, ನಾವು ಸವಾರಿ ಮಾಡಿದ್ರೆ ತಪ್ಪಿಲ್ಲ ಎಂದು ಕುದುರೆ ಸವಾರಿ ಬಳಿಕ ಆರತಿ ಹೇಳಿಕೊಂಡಿದ್ದಾರೆ. ಸವಾರಿಯುದ್ದಕ್ಕೂ ಆರತಿ ಅವರಿಗೆ ಗೆಳತಿಯರು ಸಾಥ್ ನೀಡಿದ್ದರು. ಇದನ್ನೂ ಓದಿ: ವಧುವಿಲ್ಲದೆ ಮದುವೆ ಮಾಡಿ ಮಗನ ಕನಸು ನನಸು ಮಾಡಿದ ಅಪ್ಪ!