ಲಕ್ನೋ: ನೂರಾರು ಕನಸು ಕಟ್ಟಿಕೊಂಡು ವಧು ಮದುವೆಯಾಗಿ ಪತಿಯ ಮನೆಗೆ ಹೋಗಿರುತ್ತಾಳೆ. ಆದರೆ ಉತ್ತರ ಪ್ರದೇಶ ಆಗ್ರಾದಲ್ಲಿ ಮೊದಲ ರಾತ್ರಿಯೇ ಪತಿಯೊಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದು ಕಣ್ಣೀರಿಟ್ಟು ಮನೆ ಬಿಟ್ಟು ಹೋಗಿದ್ದಾರೆ.
ಈ ಘಟನೆ ಆಗ್ರದ ಬಾಹ್ ತೆಹ್ಸಿಲ್ ಅಶೋಕ್ ನಗರದಲ್ಲಿ ನಡೆದಿದೆ. ಆಗ್ರಾದ ನಿವಾಸಿಯಾದ ಸುರೇಶ್ ಮಿಶ್ರಾ ಅವರ ಮಗ ಧೀರಜ್ ಗೆ ಜನವರಿ 22ರಂದು ವಧು ತನು ಜೊತೆ ಮದುವೆ ನಡೆದಿತ್ತು. ನಂತರ ಜನವರಿ 23ರಂದು ತನು ಪತಿಯ ಮನೆಗೆ ಹೋಗಿದ್ದಾರೆ. ಅಂದು ಮೊದಲ ರಾತ್ರಿಯ ಕಾರ್ಯಕ್ರಮವಿತ್ತು. ಆದ್ದರಿಂದ ತನು ರೂಮಿಗೆ ಹೋಗಿದ್ದು, ಆಗ ಪತಿ ಧೀರಜ್ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೇ ಧೀರಜ್ ತಂದೆ-ತಾಯಿ ಕೂಡ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದಿದೆ. ಇದರಿಂದ ನೊಂದ ವಧು ತನು ಕಣ್ಣೀರಿಟ್ಟು ಮುಂಜಾನೆ ಮನೆಯನ್ನು ಲಾಕ್ ಮಾಡಿ ತವರು ಮನೆಗೆ ಹೋಗಿದ್ದಾರೆ.
Advertisement
Advertisement
ಇತ್ತ ಎರಡು ದಿನಗಳ ಬಳಿಕ ರೂಮಿನಲ್ಲಿ ಬಂಧಿಯಾಗಿದ್ದ ಧೀರಜ್ ಹಾಗೂ ಪೋಷಕರ ಕಿರುಚಾಡಿದ್ದಾರೆ. ಆಗ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮನೆ ಬೀಗ ಮುರಿದು ಅವರನ್ನು ರಕ್ಷಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಮೆಂಟಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಕಳೆದ ವರ್ಷದ ಅಂದರೆ ಜುಲೈನಲ್ಲಿ ಧೀರಜ್ ಮತ್ತು ತನು ನಿಶ್ಚಿತಾರ್ಥ ನಡೆದಿತ್ತು. ಅಂದು ಹುಡುಗ ಮತ್ತು ಪೋಷಕರ ಆರೋಗ್ಯದಲ್ಲಿ ಅಷ್ಟೇನು ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಇದ್ದಕ್ಕಿದ್ದಂತೆ ಮೂವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವೆರಿಸಿದ್ದಾರೆ. ಆದರೆ ಒಂದೇ ಬಾರಿ ಮೂವರ ಮಾನಸಿಕ ಸ್ಥಿತಿ ಹದಗೆಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv