ಭೋಪಾಲ್: ವಧು ತಲೆ ಮೇಲೆ ದಾವಣಿ ಹಾಕಲ್ಲ ಎಂದು ಹೇಳಿದ್ದಕ್ಕೆ ವರ ಹಾಗೂ ವಧುವಿನ ಕುಟುಂಬದವರ ನಡುವೆ ಜಗಳವಾಗಿ ಮದುವೆಯೇ ರದ್ದಾಗಿರುವ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ.
ವರ್ಷ ಸೋನವಾ ಹಾಗೂ ವಲ್ಲಭ ಪಾಂಚೋಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಮದುವೆ ಮೊದಲು ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ವರ್ಷ ಸೀರೆ ಬದಲು ಸಂಜೆ ಧರಿಸುವ ಗೌನ್‍ನನ್ನು ಧರಿಸಿರುವುದನ್ನು ವರನ ಕುಟುಂಬಸ್ಥರು ಗಮನಿಸಿದ್ದಾರೆ. ಬಳಿಕ ಸೀರೆಯನ್ನು ಧರಿಸುವಂತೆ ವಧುವಿಗೆ ತಿಳಿಸಿದ್ದಾರೆ.
ಸೀರೆ ಧರಿಸುವಂತೆ ವಲ್ಲಭ ಕುಟುಂಬಸ್ಥರು ವರ್ಷಗೆ ಹೇಳಿದ್ದರು. ಆದರೆ ವರ್ಷ ವರನ ಕುಟುಂಬದವರ ಮಾತನ್ನು ಒಪ್ಪಲು ನಿರಾಕರಿಸಿದ್ದಾಳೆ. ಬಳಿಕ ಈ ವಿಷಯಕ್ಕಾಗಿ ವಧು ಹಾಗೂ ವರನ ಕುಟುಂಬದವರ ನಡುವೆ ವಾದ-ವಿವಾದವಾಗಿ ಜಗಳ ಶುರುವಾಗಿದೆ.
ಮದುವೆ ಮನೆಯಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದಂತೆ ವರ ವಲ್ಲಭ್ ತನ್ನ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಧುವಿನ ಕುಟುಂಬ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನೆ.
ವರ ಹಾಗೂ ವಧುವಿನ ಕುಟುಂಬಸ್ಥರವನ್ನು ನಡುವೆ ನಡೆಯುತ್ತಿದ್ದ ಜಗಳವನ್ನು ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ನಡೆಸುವ ಪ್ರಯತ್ನ ನಡೆಸಿದ್ದಾರೆ. ಆದರೆ ರಾಜಿಯಾಗದ ಕಾರಣ ವಧು ಹಾಗೂ ವರನ ಕುಟುಂಬದವರು ಸತತ ಮೂರು ಗಂಟೆ ಚರ್ಚೆ ನಡೆಸಿ ಈ ಮದುವೆಯನ್ನೇ ನಿಲ್ಲಿಸಿದ್ದಾರೆ.
ವರ್ಷ ಹಾಗೂ ವಲ್ಲಭ ಇಬ್ಬರು ಉತ್ತಮ ಕೆಲಸದಲ್ಲಿದ್ದಾರೆ. ವಲ್ಲಭ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡಿದರೆ, ವರ್ಷ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv