ನವದೆಹಲಿ: ಇನ್ನೇನು ಮದುವೆ ಆಗಬೇಕೆನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದಾಳೆ. ಕಾರಣ ತಾಳಿ ಕಟ್ಟುವ ವೇಳೆ ವಧುವಿಗೆ ವರನ ಒಂದು ಹಲ್ಲು ಮುರಿದಿದ್ದು ಕಾಣಿಸಿದ್ದು, ಇದ್ರಿಂದಾಗಿ ನನಗೆ ಈ ಯುವಕನ ಮದುವೆ ಆಗಲು ಇಷ್ಟವಿಲ್ಲ ಎಂದು ಮದುವೆ ನಿರಾಕರಿಸಿದ್ದಾಳೆ.
ಇದನ್ನೂ ಓದಿ: ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿ, ಸುಸ್ತಾಗಿ ಬಿದ್ದ ವಧು- ಮದುವೆ ಕ್ಯಾನ್ಸಲ್ !
ರಾಬರ್ಟ್ ಸರ್‍ಗಂಜ್‍ನ ಕೊತವಾಲಿಯ ನಿವಾಸಿಗಳಾದ ವಧು-ವರರಿಗೆ ದೆಹಲಿಯ ಸೋನಭದ್ರ ಎಂಬಲ್ಲಿ ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿತ್ತು. ವರ ಇನ್ನೇನು ವಧುವಿಗೆ ತಾಳಿ ಕಟ್ಟಿಯೇ ಬಿಡುತ್ತಾನೆ ಅಂದಾಗ ವಧುವಿಗೆ ತನ್ನ ಭಾವಿ ಪತಿಗೆ ಒಂದು ಹಲ್ಲು ಇಲ್ಲದಿರುವುದು ಕಾಣಿಸಿದೆ.
ಇದನ್ನೂ ಓದಿ: ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್
ಇದ್ರಿಂದ ಆಕ್ರೋಶಗೊಂಡ ವಧು ಈ ಮದುವೆ ಬೇಡ ಎಂದು ಮಂಟಪದಿಂದ ಹೊರಬಂದಿದ್ದಾಳೆ. ಈ ವೇಳೆ ಮದುವೆಗೆ ಬಂದಿದ್ದ ಸಂಬಂಧಿಗಳು ಮತ್ತು ಪೋಷಕರು ಯುವತಿಯನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿದ್ರೂ, ವಧು ಮಾತ್ರ ಒಪ್ಪಿಗೆ ನೀಡಿಲ್ಲ.
ಇದನ್ನೂ ಓದಿ: ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು!
ಸುಳ್ಳು ಹೇಳಿದ್ರು: ಇನ್ನು ಮದುವೆಗೆ ಮುಂಚೆ ಯುವಕ 10ನೇ ತರಗತಿವರೆಗೆ ಓದಿಕೊಂಡಿದ್ದಾನೆ ಎಂದು ಯುವತಿಗೆ ಹೇಳಲಾಗಿತ್ತು. ಆದ್ರೆ ಈ ಗಲಾಟೆಯಲ್ಲಿ ವರ ಕೇವಲ 5ನೇ ತರಗತಿ ಮಾತ್ರ ಓದಿದ್ದು ಎಂಬ ಸತ್ಯ ಬೆಳಕಿಗೆ ಬಂದಿದೆ.
ಒಟ್ಟಿನಲ್ಲಿ ವರನ ಕಡೆಯವರ ಸುಳ್ಳುಗಳಿಂದಾಗಿ ಮದುವೆ ಮುರಿದು ಬಿದ್ದಿದ್ದು, ವಧುವಿನ ತಂದೆ ವರನಿಗೆ ತಿಲಕ ಹಚ್ಚುವ ವೇಳೆ ನೀಡಿದ್ದ 30 ಸಾವಿರ ರೂ. ಹಣ ಹಿಂದುರುಗಿಸುವಂತೆ ಕೇಳಿದ್ದಾರೆ. ಆದ್ರೆ ವರನ ತಂದೆ ಮಾತ್ರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.