ನೋಮ್ ಪೆನ್: ಮೊದಲ ರಾತ್ರಿಯಂದೇ ಕುಡಿದು ರೂಮಿನ ಹೊರಗಡೆ ವರ ಮಲಗಿಕೊಂಡಿದ್ದ. ಈ ವೇಳೆ ಪಕ್ಕದ ಮನೆಯ ಹುಡುಗ ಹೋಗಿ ವಧುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿರುವ ಘಟನೆ ಕಾಂಬೋಡಿಯಾದಲ್ಲಿ ನಡೆದಿದೆ.
ಆರೋಪಿ 18 ವರ್ಷದ ಚೋಯೆನ್ ಚಾನ್ಸೆಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕಾಂಬೋಡಿಯಾದ ಸಂತ್ರಸ್ತೆ ಮದುವೆಯ ಮೊದಲ ರಾತ್ರಿಯಂದು ರೂಮಿಗೆ ಹೋಗಿದ್ದಾರೆ. ಆದರೆ ಪತಿ ಅಂದು ತುಂಬಾ ಕುಡಿದಿದ್ದರಿಂದ ಹೊರಗಡೆಯೇ ಒಂದು ಮೇಜಿನ ಮೇಲೆ ಮಲಗಿಕೊಂಡಿದ್ದಾನೆ. ಇದನ್ನು ನೋಡಿದ ಆರೋಪಿ ಯುವಕ ಪರಿಸ್ಥಿತಿಯ ಲಾಭ ಪಡೆದು ಪತಿಯಂತೆ ಹೋಗಿ ವಧುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.
Advertisement
Advertisement
ಅದಾಗಲೇ ರೂಮಿನಲ್ಲಿ ಲೈಟ್ ಆಫ್ ಮಾಡಿದ್ದರಿಂದ ಆರೋಪಿ ವಧುವಿನ ಪತಿಯಂತೆ ಒಳಗೆ ಹೋಗಿದ್ದಾನೆ. 18 ವರ್ಷದವಳಾದ ವಧುವಿಗೆ ಅದು ಬೇರೆ ವ್ಯಕ್ತಿ ಎಂಬುದು ಗೊತ್ತಾಗಿಲ್ಲ. ಸಂತ್ರಸ್ತೆ ಆರೋಪಿಯನ್ನ ತನ್ನ ಪತಿ ಎಂದುಕೊಂಡಿದ್ದಳು. ಬಳಿಕ ಮುಂಜಾನೆ ಎದ್ದಾಗ ತನ್ನ ಪಕ್ಕದಲ್ಲಿ ಮಲಗಿರುವುದು ಬೇರೆ ಹುಡುಗ, ನನಗೆ ಮೋಸ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಗೊತ್ತಾಗಿ ಕೂಗಿಕೊಂಡಿದ್ದಾಳೆ.
Advertisement
ಆರೋಪಿ ಚೋಯೆನ್ ಚಾನ್ಸೆಂಗ್ ತುಂಬಾ ದಿನದಿಂದ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದನು. ಆದರೆ ಬಡ ಕುಟುಂಬದಿಂದ ಬಂದ ಕಾರಣ ಅವನು ಆಕೆಗೆ ಪ್ರೀತಿಯ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಬಳಿಕ ಮದುವೆಯ ದಿನ ಅವನು ದಂಪತಿಯ ಮೇಲೆ ಕಣ್ಣಿಟ್ಟಿದ್ದ. ವಧುವಿನ ಪಕ್ಕದಲ್ಲೇ ಆರೋಪಿಯ ಮನೆ ಇದ್ದುದ್ದರಿಂದ ಅವರ ಮೇಲೆ ಗಮನವಿರಿಸುವುದು ಸುಲಭವಾಗಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Advertisement
ಆರೋಪಿ ವಿಚಾರಣೆ ವೇಳೆ ಸಂತ್ರಸ್ತೆ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದೇನೆ ಎಂದು ಮೊದಲು ಹೇಳಿದ್ದಾನೆ. ನಂತರ ಒಂದು ಬಾರಿ ಅತ್ಯಾಚಾರ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.
ಪೊಲೀಸರು ಆರೋಪಿಯನ್ನು ಸದ್ಯ ಬಂಧಿಸಿದ್ದಾರೆ. ಆರೋಪಿಯ ಈ ಕೃತ್ಯ ಸಾಬೀತಾದ್ರೆ 10 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಅತ್ತ ವರನ ಕುಟುಂಬದವರು ವಧುವನ್ನು ಬೇಡ ಎಂದು ನಿರಾಕರಿಸಿದ್ದು, ಮದುವೆಯನ್ನು ಕ್ಯಾನ್ಸಲ್ ಮಾಡಬೇಕೆಂದು ಹೇಳಿದ್ದಾರೆ.