ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನು ಹುಡುಕಿ ಬೆಂಗಳೂರಿಗೆ ಬಂದಿದ್ದ ವಧುವಿನ ಪೋಷಕರಿಗೆ ವಂಚನೆ ಮಾಡಿರುವ ವಿಚಾರವೊಂದು ಬೆಳಕಿಗೆ ಬಂದಿದೆ.
ಕೊಯಮತ್ತೂರಿನಿಂದ ಬೆಂಗಳೂರಿಗೆ: ತಮಿಳುನಾಡಿನ ಕೊಯಮತ್ತೂರಿನ (Coimbatore Tamilnadu) ದಂಪತಿ ತಮ್ಮ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯ ಆಗಿದ್ದ. ನಿಮ್ಮ ಮಗಳು ನಂಗೆ ಇಷ್ಟವಾಗಿದ್ದಾಳೆ. ನಾನು ಮದುವೆಯಾಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಈ ಮಾತು ನಂಬಿ ಮದುವೆ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಕೊಯಮತ್ತೂರಿನಿಂದ ಬೆಂಗಳೂರಿಗೆ ಬಂದಿದ್ರು.
ಹಣ ಕಳೆದುಕೊಂಡಿದ್ದು ಹೇಗೆ?: ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ (Mejestic Railway Station) ಬಂದು ಫೋನ್ ಮಾಡಿದ ವೇಳೆ ವರ ಪವನ್ ಅಗರವಾಲ್, ನಂಗೆ ಮನೆ ಹತ್ರ ಸ್ವಲ್ಪ ಕೆಲಸ ಇದೆ. ತನ್ನ ಬದಲು ತನ್ನ ಚಿಕ್ಕಪ್ಪ ಬಂದು ಮನೆಗೆ ಕರೆದುಕೊಂಡು ಬರುತ್ತಾರೆ ಎಂದಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಕರೆ ಮಾಡಿದ ಪವನ್, ತನ್ನ ಚಿಕ್ಕಪ್ಪ ಟಿಕೆಟ್ ರಿವರ್ಸ್ ಮಾಡಲು ಪರ್ಸ್ ಮರೆತಿದ್ದಾರೆ. ನೀವು 10 ಸಾವಿರ ರೂ.ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುವುದಾಗಿ ಹೇಳಿದ್ದ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‍ನಲ್ಲಿ ಕುಡುಕರ ಗಲಾಟೆ- ಓರ್ವನನ್ನು ತಳ್ಳಿ ಹತ್ಯೆಗೈದ
ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪನಿಗೆ 10 ಸಾವಿರ ಕೊಟ್ಟಿದ್ದರು. ಆದರೆ ರಿಸರ್ವೆಷನ್ ಮಾಡಿಸಿ ಬರುತ್ತೇನೆ ಎಂದು ಹೋದವನು ವಾಪಸ್ ಬರಲೇ ಇಲ್ಲ. ಪವನ್ ಮತ್ತು ಆತನ ತಂದೆಗೆ ಕರೆ ಮಾಡಿದ್ರೆ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ.
ಈ ಸಂಬಂಧ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದಾರೆ.