ಮಂಗಳೂರು: ಹಸೆಮಣೆ ಏರಬೇಕಾಗಿದ್ದ ವಧು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಡಬಿದಿರೆ ದರೆಗುಡ್ಡೆಯಲ್ಲಿ ನಡೆದಿದೆ.
ಪ್ರಿಯಾಂಕ (25) ನಾಪತ್ತೆಯಾದ ನವ ವಧು. ಇವರ ಮದುವೆ ಡಿ.11ರಂದು ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ನಿಶ್ಚಯವಾಗಿತ್ತು.
ಶನಿವಾರ ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಮದುವೆಗೆ ಮುನ್ನ ಶುಕ್ರವಾರ ರಾತ್ರಿ ಪ್ರಿಯಾಂಕ ಪರಾರಿಯಾಗಿದ್ದಾರೆ. ಅಲ್ಲದೇ ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್ ಹಾಗೂ ತನ್ನ ವಸ್ತುಗಳೊಂದಿಗೆ ಪರಾರಿಯಾಗಿದ್ದು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.
ತಂದೆ ಇಲ್ಲದ ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದು ಈಗ ಮಗಳೇ ಮರ್ಯಾದೆಯನ್ನು ಹರಾಜು ಹಾಕಿ ಪರಾರಿಯಾಗಿದ್ದು ತಾಯಿಯ ನೆಮ್ಮದಿ ಕೆಡಿಸಿದೆ. ಇದೆಲ್ಲದರ ನಡುವೆ ಪ್ರಕರಣ ಲವ್ ಜಿಹಾದ್ ತಿರುವನ್ನು ಪಡೆಯುತ್ತಿದ್ದು ಪ್ರಿಯಾಂಕ ಕೆಲ ತಿಂಗಳ ಹಿಂದೆಯಿಂದ ಫರಂಗಿಪೇಟೆಯ ಹೈದರ್ ಎಂಬಾತನ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಹೀಗಾಗಿ ಆತನೊಂದಿಗೆ ಪ್ರಿಯಾಂಕ ಪರಾರಿಯಾಗಿದ್ದಾಳೆಂಬ ಶಂಕೆ ವ್ಯಕ್ತವಾಗಿದೆ.
ಪ್ರಸ್ತುತ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ವಧು ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.