ದಕ್ಷಿಣ ಭಾರತದ ವಧುವನ್ನು ಕಲ್ಪಿಸಿಕೊಂಡಾಗ ನಮಗೆ ಮೊದಲು ನೆನಪಾಗುವುದು ವಧುವಿನ ಸುಂದರವಾದ ಕೇಶ ವಿನ್ಯಾಸ. ಉದ್ದನೆಯ ಕೂದಲು, ಕುಚ್ಚು ಹಾಗೂ ಬಿಲ್ಲೆ. ಇದು ವಧುವಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮದುವೆ ಸಮಯದಲ್ಲಿ ಹೂವಿನ ಜಡೆ, ಸಂಪ್ರದಾಯಿಕ ಆಭರಣಗಳಿಂದ ವಧುವಿನ ಜಡೆಯನ್ನು ಸಿಂಗಾರಗೊಳಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ವಧುಗಳು ಸಂಪ್ರದಾಯಿಕ ಜಡೆಯನ್ನೇ ಹೆಚ್ಚಾಗಿ ಅನುಸರಿಸುತ್ತಿದ್ದರು. ನಿಮ್ಮ ಮದುವೆ ಸಮಯದಲ್ಲಿ ನಿಮಗೆ ಯಾವ ರೀತಿಯ ಜಡೆ ಸೂಟ್ ಆಗುತ್ತದೆ ಮತ್ತು ಅವುಗಳ ಕುರಿತ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.
Advertisement
ಹೂವಿನ ಜಡೆ
ಯಾವುದೇ ದಕ್ಷಿಣ ಭಾರತದ ವಧುವಿನ ಮದುವೆ ಹೂವಿನ ಜಡೆ ಧರಿಸದೇ ಕಂಪ್ಲೀಟ್ ಎಂದೇನಿಸುವುದಿಲ್ಲ. ಈ ಜಡೆಯ ಉದ್ದಕ್ಕೂ ಹೂವಿನಿಂದ ಸಿಂಗರಿಸಲಾಗಿದ್ದು, ಜಡೆಯ ಮೇಲ್ಭಾಗದಲ್ಲಿ ಹೂವಿನ ಕಿರೀಟದಂತೆ ಸಿಂಗರಿಸಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ವ್ಹೀಲಿಂಗ್ ಮಾಡುತ್ತಾ ಯುವಕರ ಪುಂಡಾಟ-ನೆಲಮಂಗಲ ಫ್ಲೈಓವರ್‍ನಲ್ಲಿ ಮೋಜು ಮಸ್ತಿ
Advertisement
Advertisement
ಸಂಪ್ರದಾಯಿಕ ದೇವಾಲಯ ಆಭರಣ ಜಡೆ
ಮದುವೆಯ ಸಮಯದಲ್ಲಿ ವಧು ಹೆಚ್ಚಾಗಿ ಸಂಪ್ರದಾಯಿಕ ದೇವಾಲಯದ ಆಭರಣಗಳಲ್ಲಿ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಈ ಆಭರಣಗಳು ಕೂದಲಿಗೆ ತೊಡಿಸಿರುವ ಚಿಕ್ಕ, ಚಿಕ್ಕ ಬೀಗಗಳಿಂದ ಅಲಂಕರಿಸಿದಂತೆ ಕಾಣಿಸುತ್ತದೆ. ಈ ಕೇಶ ವಿನ್ಯಾಸ ವಧುವಿನ ಅಂದವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದೇ ಹೇಳಬಹುದು.
Advertisement
ಫ್ಲೋರಲ್ ಕರ್ಲಿ ಫಿಶ್‍ಟೇಲ್ ಜಡೆ
ಈ ಕೇಶ ವಿನ್ಯಾಸವು ಮದುವೆಯ ಸಮಯದಲ್ಲಿ ಅದ್ಭುತವಾದಂತಹ ಲುಕ್ ನೀಡುತ್ತದೆ. ಈ ಜಡೆ ನೋಡಲು ಮೀನಿನ ಬಾಲದಿಂದ ಏಣೆದಿರುವಂತೆ ಕಾಣಿಸುವುದರ ಜೊತೆಗೆ ಕೆಲವು ಹೂಗಳಿಂದ ಕೇಶ ವಿನ್ಯಾಸ ಗೊಳಿಸಲಾಗಿರುತ್ತದೆ. ಇದನ್ನೂ ಓದಿ: ಮೋದಿ ಬಗ್ಗೆ ಸ್ವಾಮಿ ವ್ಯಂಗ್ಯ – ಕುದುರೆಗೆ ನೀರು ಕುಡಿಯುವಂತೆ ಮಾಡೋದು ಹೇಗೆ?
ಬನ್ ಜೊತೆಗೆ ಹೂವಿನ ಜಡೆ
ಈ ಹೇರ್ ಸ್ಟೈಲ್‍ನನ್ನು ಬೆಸ್ಟ್ ಎಂದೇ ಹೇಳಬಹುದು. ಇದನ್ನು ಬಹಳ ಸುಲಭವಾಗಿ ಕಡಿಮೆ ಅವಧಿಯಲ್ಲಿ ಹಾಕಬಹುದಾಗಿದೆ. ಮೊದಲಿಗೆ ಒಂದು ಗಂಟು ಹಾಕಿ, ಬಳಿಕ ಅದಕ್ಕೆ ಬನ್‍ನನ್ನು ಪಿನ್ ಸಹಾಯದಿಂದ ಭದ್ರವಾಗಿ ಹಾಕಬೇಕು. ಬಳಿಕ ಅದರ ಸುತ್ತಲು ಹೂವನ್ನು ಜೋಡಿಸಬೇಕು.
ಬಂಗಾರದ ಜಡೆಗಳು
ಬಂಗಾರ ಜಡೆ ಎಂದರೆ ಆಭರಣಗಳಿಂದ ಸಿಂಗರಿಸಲಾಗಿರುವ ಜಡೆಯಾಗಿದೆ. ಇದನ್ನು ಒಂದು ಪೀಳಿಯಿಂದ ಮತ್ತೊಂದು ತಲೆಮಾರಿನವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ವಧುವಿಗೆ ಸಿಂಪಲ್ ಆಗಿ ಜಡೆ ಹಾಕಿ, ಬಳಿಕ ಹೂ ಮುಡಿಸಿ, ಸರಳವಾಗಿರುವಂತಹ ಚಿನ್ನದ ಬಿಲ್ಲೆಗಳನ್ನು ಒಂದೊಂದಾಗಿ ಜೋಡಿಸಿಕೊಂಡು ಹೋಗುವುದಾಗಿದೆ. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ