ಫಸ್ಟ್ ನೈಟ್‍ನಂದೇ ನವ ವಧು ಕಿಡ್ನ್ಯಾಪ್- ಹೆಂಡ್ತಿಗಾಗಿ ಫೋಟೋ ಹಿಡಿದು ಬೀದಿ ಬೀದಿ ಅಲೆಯುತ್ತಿರೋ ಪತಿ

Public TV
1 Min Read
tmk kidnap

– ಅಪಹರಣದ ಹಿಂದೆ ಸಚಿವ ಜಯಚಂದ್ರ ಬಂಟನ ಹೆಸರು

ತುಮಕೂರು: ಪ್ರಸ್ತದ ದಿನವೇ ನವವಧು ಕಿಡ್ನ್ಯಾಪ್ ಆಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ. ನಾಪತ್ತೆ ಹಿಂದೆ ಪೊಲೀಸರು, ಮಹಿಳಾ ಸ್ವೀಕೃತಿ ಕೇಂದ್ರದವರ ಕೈವಾಡವಿದೆ ಅನ್ನೋ ಆರೋಪವೂ ಇದೆ. ಖುದ್ದು ಕಿಡ್ನ್ಯಾಪ್ ಆದ ಯುವತಿಯೇ ವಿಡಿಯೋ ಮಾಡಿ ಕಳಿಸಿದ್ದಾಳೆ. ಆದ್ರೆ ಆಕೆ ಎಲ್ಲಿದ್ದಾಳೆ ಅನ್ನೋದು ಯಾರಿಗೂ ಗೊತ್ತಿಲ್ಲ.

vlcsnap 2017 09 15 08h30m59s103

ಹೆಂಡತಿ ಫೋಟೋ ಹಿಡಿದು ಬೀದಿ ಬೀದಿ ಅಲೆಯುತ್ತಿರೋ ಈತ ಮಹೇಶ್. ಈಗ ಕಿಡ್ನ್ಯಾಪ್ ಆಗಿರೋ ವೀಣಾಳನ್ನ ಮದುವೆಯಾಗಿದ್ದವರು. ವೀಣಾ-ಮಹೇಶ್‍ಗೆ ಮೇ 21ರಂದು ಮದುವೆ ಆಗಿತ್ತು. ಮದುವೆಯಾದ 9 ದಿನಕ್ಕೆ ಪ್ರಸ್ತಕ್ಕೆ ಸಿದ್ಧತೆ ನಡೆಸ್ತಿದ್ದಾಗ ವೀಣಾಳನ್ನ ಕಿಡ್ನ್ಯಾಪ್ ಮಾಡಿಸಿದ್ದು ಶಿರಾ ತಾಲೂಕಿನ ಚನ್ನೆನಕುಂಟೆ ತಿಪ್ಪೇಶ್.

vlcsnap 2017 09 15 08h31m25s88

ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಆಪ್ತರಲ್ಲಿ ಈ ತಿಪ್ಪೇಶನೂ ಒಬ್ಬ. ವಯಸ್ಸು 40 ಆಗಿದ್ರೂ 25 ವರ್ಷದ ವೀಣಾಳ ಮೇಲೆ ಕಣ್ಣಿಟ್ಟಿದ್ದ. ಆದ್ರೆ ವೀಣಾ ಈತನನ್ನ ಮದುವೆ ಆಗಿರ್ಲಿಲ್ಲ. ಮದುವೆ ಆಗಿ ಫಸ್ಟ್‍ನೈಟ್‍ಗೆ ರೆಡಿ ಆಗ್ತಿದ್ದಾಗ ತಿಪ್ಪೇಶ ತನ್ನ ತಂಗಿಯನ್ನ ಕಳಿಸಿ ಈಕೆಯನ್ನ ಕಿಡ್ನ್ಯಾಪ್ ಮಾಡಿಸಿದ್ದ.

vlcsnap 2017 09 15 08h31m32s170

ಫಸ್ಟ್ ನೈಟ್ ದಿನವೇ ಹೆಂಡತಿಯನ್ನ ಅಪಹರಿಸಿದ್ದ ಸುದ್ದಿ ಗೊತ್ತಾದ್ಮೇಲೆ ಮಹೇಶ ತಿಪ್ಪೇಶ್ ವಿರುದ್ಧ ದೂರು ನೀಡಿದ್ದರು. ನಂತರ ವೀಣಾಳನ್ನ ಬಿಟ್ಟು ಹೋಗಿದ್ದ. ಬಳಿಕ ಪೊಲೀಸರು ಈಕೆಯನ್ನ ಕರೆದು ವಿಚಾರಣೆ ನಡೆಸಿ ಸ್ವೀಕೃತಿ ಕೇಂದ್ರಕ್ಕೆ ಒಪ್ಪಿಸಿದ್ರು. ಈಗ ಸ್ವೀಕೃತಿ ಕೇಂದ್ರದಿಂದಲೂ ಆಕೆ ನಾಪತ್ತೆಯಾಗಿದ್ದಾಳೆ. ಸಿಬ್ಬಂದಿಯನ್ನ ಕೇಳಿದ್ರೆ ಗೊತ್ತಿಲ್ಲ ಅಂತ ಕಥೆ ಕಟ್ತಿದ್ದಾರೆ.

vlcsnap 2017 09 15 08h32m01s199

ಇಷ್ಟೆಲ್ಲದರ ಮಧ್ಯೆ ಯುವತಿ ಮನೆಗೆ ವಾಪಸ್ ಬಂದಾಗ ನಾನು ನನ್ನ ಗಂಡ, ಅತ್ತೆ-ಮಾವನ ಜೊತೆ ನೆಮ್ಮದಿಯಾಗಿದ್ದೀನಿ ಅಂತ ತಿಪ್ಪೇಶನಿಗೆ ಬಾಯಿಗೆ ಬಂದಂತೆ ಬೈದಿದ್ದಾಳೆ.

vlcsnap 2017 09 15 08h31m40s254

ಇದೀಗ ವೀಣಾ ಮತ್ತೆ ನಾಪತ್ತೆಯಾಗಿದ್ದು, ದಯವಿಟ್ಟು ನನ್ನ ಹೆಂಡತಿಯನ್ನ ನನಗೆ ಒಪ್ಪಿಸಿ ಎಂದು ಗಂಡ ಮಹೇಶ್ ಅಳಲು ತೋಡಿಕೊಂಡಿದ್ದಾರೆ.

vlcsnap 2017 09 15 08h31m17s25

vlcsnap 2017 09 15 08h30m52s12

vlcsnap 2017 09 15 08h31m10s201

vlcsnap 2017 09 15 08h32m42s97

Share This Article
Leave a Comment

Leave a Reply

Your email address will not be published. Required fields are marked *