ಇಸ್ಲಾಮಾಬಾದ್: ಮದುವೆ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ವಧು ಮತ್ತು ಆಕೆಯ ಸ್ನೇಹಿತರು ಸೇರಿ ಐವರು ಸಜೀವ ದಹನವಾಗಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.
ರಾವಲ್ಪಿಂಡಿ ರಸ್ತೆಯಲ್ಲಿರುವ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತಿತ್ತು. ಮಂಗಳವಾರ ಮೆಹಂದಿ ಶಾಸ್ತ್ರ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಅಂದು ವಧುವಿನ ಜೊತೆ ಕೊಠಡಿಯಲ್ಲಿ ಆಕೆಯ ಐವರು ಸ್ನೇಹಿತರು ಇದ್ದರು. ಇತ್ತ ಸಂಬಂಧಿಗಳು ಮದುವೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಮದುವೆ ಮನೆಯಲ್ಲಿ ಬೆಂಕಿ ಆವರಿಸಿದೆ. ಆಗ ಕೊಠಡಿಯಿಂದ ಹೊರಬರಲು ಸಾಧ್ಯವಾಗದೇ ವಧು ಸೇರಿದಂತೆ ನಾಲ್ವರು ಸ್ನೇಹಿತರು ಬೆಂಕಿಯಲ್ಲಿ ಸಜೀವ ದಹನರಾಗಿದ್ದಾರೆ.
ಮೆಹಂದಿ ಶಾಸ್ತ್ರದಲ್ಲಿ ಸುಮಾರು 40-50 ಅತಿಥಿಗಳು ಉಪಸ್ಥಿತರಿದ್ದು, ಬೆಂಕಿ ಆವರಿಸಿದ ತಕ್ಷಣ ಕೆಲವರು ಕೆಳಗೆ ಧುಮುಕಿ ಮನೆಯಿಂದ ಪರಾರಿಯಾಗಿದ್ದಾರೆ. ಇತ್ತ ರಕ್ಷಣಾ ಪಡೆ ಬೇಗ ಬಂದಿದ್ದರೆ ನನ್ನ ಮಗಳು ಉಳಿಯುತ್ತಿದ್ದಳು. ಸಿಬ್ಬಂದಿಯ ಉದಾಸೀನತೆಯಿಂದ ಈ ದೊಡ್ಡ ಘಟನೆ ನಡೆದಿದೆ ಎಂದು ವಧುವಿನ ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದರೂ ಅವರು ತಡವಾಗಿ ಬಂದಿದ್ದಾರೆ. ಅವರು ಬೇಗ ಬಂದಿದ್ದಾರೆ ವಧುವನ್ನು ಉಳಿಸಬಹುದಾಗಿತ್ತು. ಹೀಗಾಗಿ ರಕ್ಷಣಾ ತಂಡದ ನಿರ್ಲಕ್ಷ್ಯದಿಂದಾಗಿ ವಧು ಮತ್ತು ಆಕೆಯ ಸ್ನೇಹಿತೆಯರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಕೆಲವು ಜನರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸೋರಿಕೆ ಕಾರಣದಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರೈಲ್ವೆ ಮಂತ್ರಿ ಸ್ಥಳಕ್ಕೆ ಹೋಗಿ ಮೃತ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಇಡೀ ಮನೆಯನ್ನು ಮರದಿಂದ ಮಾಡಲ್ಪಟ್ಟಿತ್ತು. ಆದ್ದರಿಂದ ಬೆಂಕಿಯು ವೇಗವಾಗಿ ಮನೆಯನ್ನು ಆವರಿಸಿದೆ. ಈ ಬಗ್ಗೆ ತನಿಖೆ ಕೈಗೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv