ಲಕ್ನೋ: ಹೆಣ್ಣು ಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಪದ್ಧತಿ ಉತ್ತರ ಪ್ರದೇಶದಲ್ಲಿ ಬಾಗ್ಪಾಟ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಯುವಕನೊಬ್ಬ ಹರಾಜಿನಲ್ಲಿ ಯುವತಿಯೊಬ್ಬಳನ್ನು 22 ಸಾವಿರ ರೂ ನೀಡಿ ಖರೀದಿಸಿ ಮದುವೆಯಾಗಿದ್ದಾನೆ. ಆದರೆ ಹರಾಜಿನ ವೇಳೆ ಪೂರ್ತಿ ಹಣ ನೀಡದ ಕಾರಣ ಯುವತಿಯನ್ನು ಮತ್ತೆ ವಾಪಸ್ ಕರೆದುಕೊಂಡು ಹೋದ ವೇಳೆ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ಮೃತ ಯುವಕ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಸುತ್ತಿದ್ದನು. ಕಳೆದ ಕೆಲ ದಿನಗಳ ಹಿಂದೆ ಹೆಣ್ಣು ಮಕ್ಕಳ ಹರಾಜಿನಲ್ಲಿ ಭಾಗವಹಿಸಿದ್ದ ಈತ 22 ಸಾವಿರ ರೂ. ಗಳಿಗೆ ಯುವತಿಯನ್ನು ಖರೀದಿಸಿ ಮದುವೆಯಾಗಿದ್ದನು. ಆದರೆ ಯುವತಿ ಖರೀದಿಯ ವೇಳೆ 17 ಸಾವಿರ ರೂ. ಮಾತ್ರ ಪಾವತಿಸಿದ್ದ ಆತ ಮದುವೆ ನಂತರ ಉಳಿದ ಹಣ ನೀಡುವುದಾಗಿ ತಿಳಿಸಿದ್ದ. ಆದರೆ ನಿಗದಿತ ವೇಳೆಯಲ್ಲಿ ಹಣ ನೀಡದ ಕಾರಣ ಯುವತಿ ಮಾರಾಟ ಮಾಡಿದ್ದ ಮುಕೇಶ್ ಮತ್ತು ಮೊನು ಎಂಬ ವ್ಯಕ್ತಿಗಳು ಆಕೆಯನ್ನು ವಾಪಸ್ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಪ್ರಸ್ತುತ ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.