ಚೆನ್ನೈ: ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ನವ ದಂಪತಿ ಬೋಟ್ ಮೂಲಕವಾಗಿ ರಕ್ಷಣೆ ಮಾಡಿರುವ ಘಟನೆ ಚೆನ್ನೈನ ತೇನಾಂಪೇಟ್‍ನಲ್ಲಿ ನಡೆದಿದೆ.
Advertisement
ಫ್ರಭು ಮತ್ತು ಮುತ್ತುಲಕ್ಷ್ಮಿ ಮಳೆಯ ನಡುವೆಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಥಳಕ್ಕೆ ನೀರು ನುಗ್ಗಿದರೂ ಮದುವೆ ಯಶಸ್ವಿಯಾಗಿ ನೆರವೇರಿದೆ. ಆದರೆ ಆರತಕ್ಷತೆ ಮತ್ತಿತರ ಸಮಾರಂಭಗಳನ್ನು ರದ್ದು ಮಾಡಲಾಗಿದೆ.
Advertisement
Advertisement
ಮದುವೆಗೆ 3 ತಿಂಗಳಿದ ಸಿದ್ಧತೆ ನಡೆಯುತ್ತಿತ್ತು. ನಮಗೆ ಮಳೆಯ ಬಗ್ಗೆ ತಿಳಿದಿತ್ತು, ಆದರೆ ಕೆಟ್ಟದ್ದನ್ನು ನಿರೀಕ್ಷಿಸಿರಲಿಲ್ಲ. ಮಳೆಯ ಕಾರಣದಿಂದಾಗಿ ತೊಂದರೆಯಾದರೂ ನಾವು ಮದುವೆಯನ್ನು ಆನಂದಿಸಿದ್ದೇವೆ. ನಮ್ಮ ಮದುವೆಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂದು ದಂಪತಿ ಹೇಳಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮಶಿನ್, ಫ್ರಿಡ್ಜ್, ಟಿವಿ ಬಹುಮಾನ
Advertisement
ನಾವು ಮದುವೆಯನ್ನು ಮುಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಇತರ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಭು ಹೇಳಿದರು. ದಂಪತಿ ಮತ್ತು ಇತರ ಅತಿಥಿಗಳನ್ನು ದೋಣಿಯಲ್ಲಿ ರಕ್ಷಿಸಲಾಯಿತು. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?
ಶನಿವಾರ ಸಂಜೆಯಿಂದ ಚೆನ್ನೈ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವಾರು ಜನರ ಜೀವನವನ್ನು ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಲಸಿಕೆ ಪಡೆಯದಿದ್ದರೆ ರೇಷನ್, ಗ್ಯಾಸ್, ಪೆಟ್ರೋಲ್ ಇಲ್ಲ