ಭೋಪಾಲ್: ವಧುವಿನ (Bride) ಮೇಕಪ್ (Makeup) ಸರಿಯಾಗಿ ಮಾಡದ್ದಕ್ಕೆ ಬ್ಯೂಟಿ ಪಾರ್ಲರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ ಬೆಳಕಿಗೆ ಬಂದಿದೆ.
ಡಿ.3 ರಂದು ವಧುವಿನ ಮದುವೆಯಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಮೋನಿಕಾ ಮೇಕಪ್ ಸ್ಟುಡಿಯೋಕ್ಕೆ ಕರೆದೊಯ್ದಿದ್ದಾರೆ. ಪಾರ್ಲರ್‌ನಲ್ಲಿದ್ದ ಸಿಬ್ಬಂದಿ ವಧುವಿಗೆ ಕೆಟ್ಟದಾಗಿ ಮೇಕಪ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಧು ಬ್ಯೂಟಿ ಪಾರ್ಲರ್‌ನ ಮಾಲೀಕೆ ಮೋನಿಕಾ ಪಾಠಕ್ ಅವರಿಗೆ ಕರೆ ಮಾಡಿ ಮುಖದ ಅಂದ ಕೆಡಿಸಿದ್ದಕ್ಕೆ ಅಕ್ಷೇಪಿಸಿದ್ದಾಳೆ. ಆದರೆ ಮೋನಿಕಾ ಅವಳಿಗೆ ಕ್ಷಮೆಯಾಚಿಸುವ ಬದಲು ವಧುವನ್ನು ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ಜಾತಿ ನಿಂದನೆಯನ್ನು ಮಾಡಿದ್ದಾಳೆ. ಜೊತೆಗೆ ಮೇಕಪ್‍ನ ಹಣವನ್ನು ಮೊದಲೇ ಪಡೆದಿದ್ದಳು.
Advertisement
Advertisement
ಈ ಹಿನ್ನೆಲೆಯಲ್ಲಿ ಕೋಪಗೊಂಡ ವಧು ಹಾಗೂ ವಧುವಿನ ಕುಟುಂಬಸ್ಥರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬ್ಯೂಟಿ ಪಾರ್ಲರ್‌ನ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋನಿಕಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಕಬ್ಬಿನ ಉಪ ಉತ್ಪನ್ನ ಲಾಭಾಂಶ ರೈತರಿಗೆ; ಪ್ರತಿ ಮೆಟ್ರಿಕ್ ಟನ್‌ಗೆ 50 ರೂ. ಹೆಚ್ಚುವರಿ ಪಾವತಿ – ಸರ್ಕಾರ ಆದೇಶ
Advertisement
Advertisement
ಈ ಬಗ್ಗೆ ಠಾಣಾಧಿಕಾರಿ ಅನಿಲ್ ಗುಪ್ತಾ ಮಾತನಾಡಿ, ವಧು ಹಾಗೂ ಆಕೆಯ ಕುಟುಂಬಸ್ಥರ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ವಿಚಾರದಲ್ಲಿ ಮೋನಿಕಾ ಪಾಠಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಮನಸ್ಥಿತಿ ಗೊತ್ತಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ: ಎಂಟಿಬಿ