ಡೆಹ್ರಾಡೂನ್: ಮೆಹಂದಿ ಸಮಾರಂಭದಲ್ಲಿ ವಧುವಿನ (Bride) ತಂದೆ (Father) ಡ್ಯಾನ್ಸ್ (Dance) ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದ (Uttarakhand) ಅಲ್ಮೋರಾದಲ್ಲಿರುವ ವಧುವಿನ ಮನೆಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಂದೆ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಡ್ಯಾನ್ಸ್ ಫ್ಲೋರ್ ಮೇಲೆ ಬಿದ್ದಿದ್ದಾರೆ. ಅರಿಶಿಣ ಶಾಸ್ತ್ರದ ಬಳಿಕ ಕೆಲವು ಕುಟುಂಬಸ್ಥರು ಮನೆಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: BMTC ಬಸ್ ಟಯರ್ ಅಡಿಗೆ ಬಿದ್ದು ಬೈಕ್ ಸವಾರ ಸಾವು
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಪೊಲೀಸರು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಮರುದಿನ ಸರಳವಾಗಿ ವಧು ವಿವಾಹವಾದರು (Wedding). ವಧುವಿನ ಕನ್ಯಾದಾನವನ್ನು ಆಕೆಯ ತಾಯಿಯ ಚಿಕ್ಕಪ್ಪ ಮಾಡಿದರು. ಇದನ್ನೂ ಓದಿ: ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ