ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಮತವೇ ನಮಗೆ ನೀಡುವ ಉಡುಗೊರೆ ಎಂದು ವಧುವಿನ ತಂದೆ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.
ಟಿಂಕರ್ ಮಂಜಣ್ಣ ಮೋದಿ ಅಭಿಮಾನಿಯಾಗಿದ್ದು, ತಮ್ಮ ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ “2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನೀಡುವ ಮತವೇ ನಮಗೆ ಕೊಡುವ ಉಡುಗೊರೆ” ಎಂದು ಮುದ್ರಿಸಿದ್ದಾರೆ. ಲಗ್ನ ಪತ್ರಿಕೆಯಲ್ಲಿ ಮುದ್ರಿಸಿದಂತೆ ಮಂಜಣ್ಣ ಅವರು ತಮ್ಮ ಮಗಳ ಮದುವೆಯಲ್ಲಿ ಯಾವುದೇ ಉಡುಗೊರೆ ಸ್ವೀಕರಿಸಿಲ್ಲ.
ಮಂಜಣ್ಣ ದಾವಣಗೆರೆ ನಗರದ ಕೆಬಿ ಬಡಾವಣೆ ನಿವಾಸಿಯಾಗಿದ್ದು, ಇಂದು ಅವರ ಮಗಳು ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಗರದ ಪಿಬಿ ರಸ್ತೆಯಲ್ಲಿ ಇರುವ ರೇಣುಕ ಮಂದಿರದಲ್ಲಿ ಇಂದು ಅವಿನಾಶ್ ಬಣಕಾರ ಜೊತೆ ವಧು ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಹಿಂದೆ ದಾವಣಗೆರೆಯ ಹರಿಹರದ ಸೀತಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ನವಜೋಡಿ ವಿಜಯ್ ಮತ್ತು ನಾಗಲಕ್ಷ್ಮಿ ಮದುವೆಯ ಆರತಕ್ಷತೆಯಲ್ಲಿ ‘ಮೋದಿ ಮತ್ತೊಮ್ಮೆ’ ಎಂದು ಕೂಗಿ ಸ್ನೇಹಿತರಲ್ಲಿ, ಬಂಧು-ಬಾಂಧವರಲ್ಲಿ ಮೋದಿಗೆ ವೋಟ್ ಹಾಕುವಂತೆ ಮನವಿ ಮಾಡಿಕೊಂಡಿದ್ದರು.
ವಿಜಯ್ ಹಾಗೂ ನಾಗಲಕ್ಷ್ಮಿ ಮೋದಿ ಬಗ್ಗೆ ಅಪಾಯ ಅಭಿಮಾನ ಹೊಂದಿದ್ದಾರೆ. ಈ ಬಾರಿ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ನವಜೋಡಿ ಆರತಕ್ಷತೆಯಲ್ಲಿ ಸ್ನೇಹಿತರ ಜೊತೆ ಮೋದಿ ಮತ್ತೊಮ್ಮೆ ಎಂದು ಘೋಷಣೆ ಕೂಗಿದ್ದರು.