ನವದೆಹಲಿ: ಮನುಷ್ಯ ಜೀವನದಲ್ಲಿ ಅರ್ಥಪೂರ್ಣವಾದ ಹಂತವೇ ಮದುವೆ. ಕೆಲವರ ಬಾಳಲ್ಲಿ ಅವರೇ ಹುಡುಕಿ ಹೊರಟ ದಾರಿಗೆ ಪೂರ್ಣವಿರಾಮ. ಇನ್ನೂ ಕೆಲವರ ಬಾಳಲ್ಲಿ ಅಪ್ಪ-ಅಮ್ಮಂದಿರ ಮನದ ದಾರಿಗೆ ನಿಲ್ದಾಣ.
ತಮ್ಮ ಬದುಕಿನ ಈ ವಿಶೇಷ ಕ್ಷಣದಲ್ಲಿ ಹೆತ್ತವರು ಜೊತೆಯಲ್ಲಿರಬೇಕು ಎಂಬ ಆಸೆ ಎಲ್ಲರಿಗೂ ಇರುವುದು ಸಾಮಾನ್ಯ. ಹಾಗೆಯೇ ಹೆತ್ತವರಿಗೂ ತಮ್ಮ ಮಕ್ಕಳ ಮದುವೆಯನ್ನು ಕಣ್ಣು ತುಂಬಿಸಿಕೊಳ್ಳುವ ಕ್ಷಣಕ್ಕಿಂತ ಖುಷಿಯ ಕ್ಷಣ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು. ಆದರೆ ಮಕ್ಕಳ ವಿವಾಹದ ಮುಂಚೆಯೇ ತಂದೆ-ತಾಯಿ ಅಗಲಿದಾಗ ಆಗುವ ಆ ನೋವು ಸದಾ ಕಾಡುತ್ತಲೇ ಇರುತ್ತದೆ.
Advertisement
Advertisement
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಕೆಲವೊಂದು ದೃಶ್ಯಗಳು ನಮ್ಮನ್ನು ನಿಜಕ್ಕೂ ಭಾವುಕರನ್ನಾಗಿಸುತ್ತದೆ. ಯುವತಿಯೊಬ್ಬರ ವಿವಾಹದ ಕ್ಷಣವಿದು. ತನ್ನ ತಂದೆಯ ಕೈ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಅಮ್ಮನ ಫೋಟೋ ಹಿಡಿದುಕೊಂಡು ಅಪ್ಪನೊಂದಿಗೆ ಬರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸಕ್ರಿಯ ರಾಜಕಾರಣ ತ್ಯಜಿಸಿದ ಮೆಟ್ರೋಮ್ಯಾನ್ ಇ ಶ್ರೀಧರನ್
Advertisement
ಅಗಲಿದ ಅಮ್ಮನ ಫೋಟೋವನ್ನು ಹಿಡಿದುಕೊಂಡು ಹನಿಗೂಡಿದ ಕಣ್ಣೀರಿನಿಂದ ಹೆಜ್ಜೆ ಇಡುತ್ತಿದ್ದ ದೃಶ್ಯ ನೆರೆದಿದ್ದವರನ್ನು ಭಾವುಕರನ್ನಾಗಿಸಿದೆ ಹಾಗೂ ತಂದೆ ಕೂಡಾ ಭಾವುಕಾರಾಗಿಯೇ ತಮ್ಮ ಪುತ್ರಿಯನ್ನು ಬೀಳ್ಕೊಡುವ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
Advertisement
View this post on Instagram
ಇಸ್ಲಾಮಾಬಾದ್ ಮೂಲದ ಛಾಯಾಗ್ರಾಹಕರೊಬ್ಬರಾದ ಮಹಾ ವಜಾವತ್ ಖಾನ್ ತಮ್ಮ ‘ಮಹಾಸ್‌ಫೋಟೋಗ್ರಾಫಿಆಫಿಶಿಯಲ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸಹಜವಾಗಿ ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. 37,000ಕ್ಕೂ ಅಧಿಕ ವೀಕ್ಷಣೆಯಾಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆ ಬಂದಿದೆ ಹಾಗೂ ಭಾವನಾತ್ಮಕ ದೃಶ್ಯವನ್ನೂ ಕಂಡ ಎಲ್ಲರೂ ಈ ವಧುವಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಭಾರತೀಯನಿಗೆ 3.5ಲಕ್ಷ ರೂ. ನೀಡಿದ ಗೂಗಲ್