ಬರೀಲಿ: ಅತಿಥಿಗಳ ಸಮ್ಮುಖದಲ್ಲಿ ವೇದಿಕೆಯ ಮೇಲೆ ವರನು (Groom) ವಧುವನ್ನು (Bride) ಚುಂಬಿಸಿದ (Kiss) ಹಿನ್ನೆಲೆ ವಧು ಮದುವೆಯನ್ನು (Wedding) ಮುರಿದುಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್‍ನಲ್ಲಿ ನಡೆದಿದೆ.
Advertisement
23 ವರ್ಷದ ಯುವತಿ ಪೋಷಕರು ನೋಡಿದ 26 ವರ್ಷದ ವಿವೇಕ ಅಗ್ನಿಹೋತ್ರಿ ಎಂಬ ಯುವಕನನ್ನು ಮದುವೆಯಾಗುತ್ತಿದ್ದಳು. ಮದುವೆ ಕಾರ್ಯಕ್ರಮವೂ ನಡೆದಿತ್ತು. ಹಾರ ಬದಲಿಸಿದ ಬಳಿಕ ಮದುವೆಯಾಗುತ್ತಿದ್ದ ಯುವಕ ತನ್ನ ಪತ್ನಿಯಾಗಬೇಕಿದ್ದ ಯುವತಿಗೆ ವೇದಿಕೆಯ ಮೇಲೆ ಚುಂಬಿಸಿದ. ಚುಂಬನದ ಬಳಿಕ ಯುವತಿ ಮದುವೆಯನ್ನೇ ಮುರಿದು ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಶಾಲೆಗೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ – ನೋ ಎಂಟ್ರಿ ಎಂದ ಶಿಕ್ಷಕರು
Advertisement
Advertisement
ವರ ತನ್ನ ಸ್ನೇಹಿತರ ಜೊತೆಗೆ ಬೆಟ್ಟಿಂಗ್ ಕಟ್ಟಿ ಎಲ್ಲರ ಎದುರು ನನಗೆ ಮುತ್ತು ನೀಡಿದ್ದಾನೆ. ವೇದಿಕೆಯ ಮೇಲೆ ಇದ್ದಾಗಲೇ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಸ್ವಾಭಿಮಾನದ ಬಗ್ಗೆ ಯೋಚಿಸಿಲ್ಲ. ಅವನು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾನೆ ಗೊತ್ತಿಲ್ಲ ಆದರೆ ಅವನ ನಡವಳಿಕೆಯಿಂದ ನಾನು ಆಘಾತಗೊಂಡಿದ್ದು, ಅನುಮಾನವೂ ಹೆಚ್ಚಿದೆ ಹೀಗಾಗಿ ನಾನು ಮದುವೆಯಾಗದಿರಲು ನಿರ್ಧರಿಸಿದ್ದೇನೆ ಎಂದು ವಧು ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
Advertisement
ಪ್ರಕರಣ ದಾಖಲಿಸಿಕೊಂಡಿರುವ ಬಹ್ಜೋಯ್ ಸ್ಟೇಷನ್ ಹೌಸ್ ಠಾಣೆ ಪೊಲೀಸರು ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ ಯುವತಿ ಯಾವುದೇ ಸಂಧಾನಕ್ಕೆ ಒಪ್ಪಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಕೆಲವು ದಿನಗಳ ಸಮಯ ನೀಡಲು ಮನವಿ ಮಾಡಿದ್ದು, ಆಘಾತದಿಂದ ಹೊರ ಬಂದ ಬಳಿಕ ಮನವೊಲಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಇಲ್ಲದೇ ತ್ರಿಬಲ್ ರೈಡಿಂಗ್ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಮಹಿಳೆ
ಈ ಬಗ್ಗೆ ಮಾಹಿತಿ ನೀಡಿರುವ ಎಸ್‍ಎಚ್‍ಒ ಪಂಕಜ್ ಲಾವಾನಿಯಾ ಯುವಕ ಯುವತಿ ತಾಂತ್ರಿಕವಾಗಿ ಮದುವೆಯಾಗಿದ್ದಾರೆ. ಮದುವೆಯ ಎಲ್ಲ ಕಾರ್ಯಕ್ರಮಗಳು ಅಂತ್ಯವಾಗಿದ್ದು, ಅಂತಿಮ ಘಟ್ಟದಲ್ಲಿ ಈ ಘಟನೆ ನಡೆದಿದೆ. ಪೋಷಕರು ಕಾಲಾವಕಾಶ ಕೇಳಿರುವ ಹಿನ್ನೆಲೆ ನಾವು ಯುವತಿಗೆ ಸಮಯ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.