ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!

Public TV
2 Min Read
GROOM BRIDE

ದುವೆ ಮಂಟಪದಿಂದಲೇ ವಧು ಅಥವಾ ವರ ಪರಾರಿಯಾಗಿರುವ ಘಟನೆ ಕೇಳಿದ್ದೇವೆ. ಅಲ್ಲದೆ ಕೆಲವೊಂದು ರಾದ್ಧಾಂತಗಳು ನಡೆಯುವುದು ಸಹಜ. ಇದೀಗ ಅಂಥದ್ದೇ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ವಧು- ವರ ಪರಸ್ಪರ ಹೂಮಾಲೆ ಹಾಕಿಕೊಳ್ಳುತ್ತಿರುವ ಸಂದರ್ಭದಲ್ಲಿ ವಧು ಏಕಾಏಕಿ ನನಗೆ ಈ ಮದುವೆ ಬೇಡ ಎಂದು ಹೇಳಿರುವುದು ಸಂಬಂಧಿಕರನ್ನು ಅಚ್ಚರಿಗೊಳಿಸಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

BRIDE

ವೀಡಿಯೋದಲ್ಲಿ ಹುಡುಗಿ ಮತ್ತು ಹುಡುಗ ರೆಡಿಯಾಗಿ ಇನ್ನೇನು ತಾಳಿ ಕಟ್ಟುತ್ತಿದ್ದರು. ಇದಕ್ಕೂ ಮುನ್ನ ಹಾರ ಬದಲಿಸಿಕೊಳ್ಳೋ ಸಂಪ್ರದಾಯವಿದೆ. ಅಂತೆಯೇ ಇಲ್ಲಿ ವರ ಹಾಗೂ ವಧು ಪರಸ್ಪರ ಹಾರ ಬದಲಿಸಿಕೊಳ್ಳುತ್ತಿದ್ದರು. ವರ ಹೂಮಾಲೆಯನ್ನು ವಧುವಿನ ಕೊರಳಿಗೆ ಹಾಕಲು ರೆಡಿಯಾಗುತ್ತಿದ್ದಂತೆಯೇ ವಧು ಈ ಮದುವೆ ನನಗೆ ಬೇಡವೆಂದು ಹೇಳಿದ್ದಾಳೆ. ವರ ಅನಕ್ಷರಸ್ಥನಾಗಿದ್ದು, ನಾನು ಬಿಎಡ್ ಓದಿದ್ದೇನೆ. ಹೀಗಾಗಿ ಈತನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ – ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ನಟ ವಿಜಯ್ ಬಾಬು

MARRIAGE

ಈ ವೇಳೆ ಸಂಬಂಧಿಕರು ಸೇರಿಕೊಂಡು ವಧುವನ್ನು ಪ್ರಶ್ನಿಸಿದ್ದಾರೆ. ಮದುವೆಗೆ ಬಂದಿದ್ದ ವ್ಯಕ್ತಿ ಜೊತೆ ವಧು ಮಾತನಾಡುತ್ತಾ, ನಾನು ವಿದ್ಯಾವಂತಳಾಗಿದ್ದು, ಬಿಎಡ್ ಓದುತ್ತಿದ್ದೇನೆ. ಆದರೆ ಅವನು ಸಂಪೂರ್ಣ ಅನಕ್ಷರಸ್ಥ. ಮುಂದೆ ನಾನು ಅವನೊಂದಿಗೆ ಸಂತೋಷವಾಗಿರಲು ಸಾಧ್ಯವೇ..?. ನೀನೇ ಹೇಳು. ಹೀಗಾಗಿ ನಾನು ಅವನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

BRIDE GROOM 1

ಇದೇ ವೇಳೆ ಕಾರ್ಯಕ್ರಮಕ್ಕೆ ಬಂದ ಮತ್ತೊಬ್ಬ ವ್ಯಕ್ತಿ ಗೊತ್ತಿದ್ದರೂ ಯಾಕೆ ಮದುವೆಗೆ ಒಪ್ಪಿಕೊಂಡೆ ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಆಕೆ, ಹಣಕ್ಕೋಸ್ಕರ ನಮ್ಮ ತಂದೆ ಆತನನ್ನೇ ಮದುವೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದೇ ವೇಳೆ ಹಲವು ಮಂದಿ ವಧುವನ್ನು ಬೇರೆ ಬೇರೆ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಅವಳು, ನನಗೆ ನನ್ನಷ್ಟೇ ಓದಿದ ಯುವಕ ಬೇಕು. ಇದರಿಂದ ನಾವಿಬ್ಬರು ಇಂಗ್ಲಿಷ್ ಮಾತನಾಡಿಕೊಳ್ಳಬಹುದು. ಆದರೆ ಅಕ್ಷರ ಜ್ಞಾನ ಇಲ್ಲದವನನ್ನು ಮದುವೆಯಾಗಿ ಏನು ಮಾಡಲಿ ಎಂದು ಅಲವತ್ತುಕೊಂಡಿದ್ದಾಳೆ.

 

Share This Article
Leave a Comment

Leave a Reply

Your email address will not be published. Required fields are marked *