ತಿರುವನಂತಪುರಂ: ತುರ್ತು ಪರಿಸ್ಥಿತಿಯಲ್ಲಿ ಬಳಸಲಾಗುವ ಅಂಬುಲೆನ್ಸ್ನಲ್ಲಿ ವಧು ಹಾಗೂ ವರನಿಗೆ ಪ್ರಯಾಣಿಸಲು ಅವಕಾಶ ನೀಡಿದ ಚಾಲಕ ಹಾಗೂ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಾಲೀಕನಿಗೆ ಪೊಲೀಸರು ನೋಟಿಸಿ ಕಳುಹಿಸಿದ್ದು, ಚಾಲಕನ ಪರವಾನಗಿಯನ್ನು ರದ್ದು ಮಾಡಲಾಗಿದೆ.
ಅಂಬುಲೆನ್ಸ್ನಲ್ಲಿ ವಧು-ವರ ಪ್ರಯಾಣಿಸಿದ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಕಟ್ಟಾನಂ ಗ್ರಾಮದಲ್ಲಿ ನಡೆದಿದೆ. ಇದರ ವೀಡಿಯೋ ಕೂಡಾ ವೈರಲ್ ಆಗಿದ್ದು, ತುರ್ತು ಸೇವೆಗೆ ಬಳಸಲಾಗುವ ಅಂಬುಲೆನ್ಸ್ನಲ್ಲಿ ವಧು-ವರರು ಪ್ರಯಾಣಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ಪೊಲೀಸರು ಅಂಬುಲೆನ್ಸ್ ಚಾಲಕ ಹಾಗೂ ಮಾಲೀಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ
Advertisement
Advertisement
ಅಂಬುಲೆನ್ಸ್ ಮಾಲೀಕರ ಸಂಘ ಈ ಕೃತ್ಯದ ವಿರುದ್ಧ ದೂರು ನೀಡಿದೆ. ಅಂಬುಲೆನ್ಸ್‌ಗಳನ್ನು ಈ ರೀತಿಯಾಗಿ ಬಳಸುವುದು ಕಾನೂನು ಬಾಹಿರ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ. ಮಾಲಕ ಹಾಗೂ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಜಿ ಪ್ರಸಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯಾಚ್‍ಬಾಕ್ಸ್ ನಲ್ಲಿ ಮಡಚಿಡುವ ಸೀರೆ ನೇಯ್ದ ನೇಕಾರ
Advertisement
ಆದರೆ ಅಂಬುಲೆನ್ಸ್ ಚಾಲಕ ಈ ಆರೋಪವನ್ನು ನಿರಾಕರಿಸಿದ್ದಾನೆ. ವಧು ಹಾಗೂ ವರರನ್ನು ಮುಂದಿನ ಸೀಟುಗಳಲ್ಲಿ ಮಾತ್ರವೇ ಕೂರಿಸಲಾಗಿತ್ತು. ಈ ಸಂದರ್ಭದಲ್ಲಿ ಸೈರನ್ ಆನ್ ಮಾಡಿರಲಿಲ್ಲ ಎಂದು ಚಾಲಕ ತಿಳಿಸಿದ್ದಾನೆ.