ಚಾಮರಾಜನಗರ: ಭಾರತ ಕಿರಿಯರ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಮದುವೆ ಮಂಟಪದಲ್ಲಿ ವಧು- ವರರು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.
ಶನಿವಾರ ನಡೆದ ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದ ಹಿನ್ನೆಲೆಯಲ್ಲಿ ದೇಶದ್ಯಾಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಆದರೆ ಚಾಮರಾಜನಗರದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಇಂದು ನವ ಜೀವನಕ್ಕೆ ಕಾಲಿಡುತ್ತಿದ್ದ ಕೆ.ಆರ್ ಕಾರ್ತಿಕ್ ಮತ್ತು ಕೆ.ಪಿ ಶ್ವೇತಾ ಮದುವೆ ಮಂಟಪದಲ್ಲಿ ಭಾರತದ ಬಾವುಟ ಹಿಡಿದು ಸಂಭ್ರಮಪಟ್ಟರು.
Advertisement
Advertisement
ಇದಲ್ಲದೇ ಆರತಕ್ಷತೆ ವೇಳೆ ಭಾರತದ ಕಿರಿಯ ಕ್ರಿಕೆಟ್ ತಂಡದ ಸದಸ್ಯರ ಬಾವುಟ ಹಿಡಿದು ಫೋಟೋ ಕ್ಲಿಕ್ ಮಾಡಿಸಿಕೊಂಡರು. ಈ ಮೂಲಕ ಈ ನವ ದಂಪತಿಗಳು ತಮ್ಮ ದೇಶ ಪ್ರೇಮ ಹಾಗೂ ಕ್ರಿಕೆಟ್ ಮೇಲೆ ಇರುವ ಒಲವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ವಿರಾಟ್ ಕೊಹ್ಲಿ, ಉನ್ಮುಕ್ತ್ ಚಾಂದ್ ದಾಖಲೆ ಮುರಿದ ಪೃಥ್ವಿ ಶಾ